ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಬೇಲಿಯೇ ಎದ್ದು ಹೊಲ ಮೇಯ್ದಂತೆ” ಆಗಿದೆ ಗೃಹ ಸಚಿವ ಡಾ.ಜಿ ಪರಮೇಶ್ವರ ನಡೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಬೆಟ್ಟಿಂಗ್ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಮಂತ್ರಿಗಳೇ ಬೆಟ್ಟಿಂಗ್‘ಗೆ ಪ್ರೋತ್ಸಾಹಿಸುವುದು ಎಷ್ಟರ ಮಟ್ಟಿಗೆ ಸರಿ ?
ರಾಜ್ಯದಲ್ಲಿ ಅಕ್ರಮ ಬೆಟ್ಟಿಂಗ್, ಜೂಜು ದಂಧೆಗಳನ್ನು ಮಟ್ಟ ಹಾಕಬೇಕಾದ ಜವಾಬ್ದಾರಿ ಹೊತ್ತಿರುವ ಗೃಹ ಸಚಿವರೇ ಬಹಿರಂಗವಾಗಿ ಬೆಟ್ಟಿಂಗ್ ಕಟ್ಟುವುದು ಜನಸಾಮಾನ್ಯರಿಗೆ ಯಾವ ರೀತಿಯ ಸಂದೇಶ ನೀಡುತ್ತದೆ ?
ಪರಮೇಶ್ವರ್ ಅವರೇ ? ಇದು ನಿಮ್ಮ ಸ್ಥಾನದ ಘನತೆಗೆ ಕಪ್ಪು ಚುಕ್ಕೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಶಾಸಕ ವೀರೇಂದ್ರ ಪಪ್ಪಿ ಕ್ಯಾಸಿನೊ, ಬೆಟ್ಟಿಂಗ್ ದಂಧೆಯಲ್ಲಿ ನೂರಾರು ಕೋಟಿ ಅಕ್ರಮವಾಗಿ ಸಂಪಾದಿಸಿ ಜೈಲು ಸೇರಿದ್ದಾರೆ. ಬೆಟ್ಟಿಂಗ್ ಆಡುವುದು ಕಾನೂನು ಬಾಹಿರ ಎಂಬುದನ್ನು ಗೃಹ ಸಚಿವರು ಮರೆತಂತಿದೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

