ಕಾಂಗ್ರೆಸ್‌ ನಂಬಿ ಮೋಸ ಹೋದ ಗೃಹಲಕ್ಷ್ಮಿಯರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ನಂಬಿ ಮೋಸಹೋದ ಗೃಹಲಕ್ಷ್ಮಿಯರು! ಎಂದು ಜೆಡಿಎಸ್ ಆರೋಪಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಅವರೇ ಅದೆಷ್ಟು ಅಂತ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತೀರಿ. ನಿಮಗೆ ಆತ್ಮಸಾಕ್ಷಿ ಇಲ್ಲವೇ ? ಎಂದು ಜೆಡಿಎಸ್ ಪ್ರಶ್ನಿಸಿದೆ.

 ಮೇ ತಿಂಗಳ ಮೊದಲ ವಾರದಲ್ಲಿ 3 ತಿಂಗಳ ಗೃಹ ಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡುತ್ತೀವಿ ಎಂದು ತಾವೇ ಹೇಳಿದ್ದೀರಿ. ಮೇ ತಿಂಗಳ ಮೂರನೇ ವಾರ ಕಳೆಯುತ್ತ ಬಂದಿದೆ. ಮೂರ್ನಾಲ್ಕು ತಿಂಗಳ ಗೃಹಲಕ್ಷ್ಮಿ ಬಾಕಿ ಹಣ ಇನ್ನೂ ಯಾರಿಗೂ ತಲುಪಿಲ್ಲ.  

ವಚನ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸರಿಯಾದ ಸಮಯಕ್ಕೆ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ದೂರಿದೆ.

 

Share This Article
error: Content is protected !!
";