ಚಂದ್ರವಳ್ಳಿ ನ್ಯೂಸ್, ಕೇರಳ:
ಐಎಎಸ್ ಅಧಿಕಾರಿ ಪತಿ ತನ್ನ ಪತ್ನಿಗೆ ಅಧಿಕಾರ ಹಸ್ತಾಂತರಿ ತಾವು ನಿವೃತ್ತರಾದ ಅಪರೂಪದ ವಿಧ್ಯಮಾನ ಕೇರಳದಲ್ಲಿ ನಡೆದಿದೆ. ಪತಿ ಯಾವ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾನೋ ಅದೇ ಹುದ್ದೆ ಪತ್ನಿಗೂ ಸಿಕ್ಕಿದೆ.
ಕೇರಳದ ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು ಅವರು ಆಗಸ್ಟ್ 31ರಂದು ನಿವೃತ್ತರಾಗಿದ್ದರು. ಡಾ.ವಿ.ವೇಣು ಅವರ ನಿವೃತ್ತಿಯ ನಂತರ ಅವರ ಪತ್ನಿ ಶಾರದಾ ಮುರಳೀಧರನ್ ಅವರು ಮುಖ್ಯಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ಪತ್ನಿಗೆ ಅಧಿಕಾರ ಹಸ್ತಾಂತರಿಸಿ ಆಕೆಯನ್ನು ಕುರ್ಚಿಯ ಮೇಲೆ ಕೂರಿಸಿದ ನಂತರ ಪತ್ನಿಗಾಗಿ ಚಪ್ಪಾಳೆ ತಟ್ಟಿದ್ದು ಕಂಡುಬಂತು.
ಕೇರಳದ ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು ಆಗಸ್ಟ್ 31 ರಂದು ನಿವೃತ್ತರಾದರು. ಸ್ವಾರಸ್ಯಕರ ಸಂಗತಿಯೆಂದರೆ ಯಾವ ಅಧಿಕಾರಿ ನಿವೃತ್ತಿ ಹೊಂದಿದ್ದರೋ ಆ ಹುದ್ದೆಯನ್ನು ಅವರ ಪತ್ನಿಗೆ ನೀಡಲಾಗಿದೆ. ಡಾ.ವಿ.ವೇಣು ಅವರು ನಿವೃತ್ತರಾದ ಬಳಿಕ ಶಾರದಾ ಮುರಳೀಧರನ್ ಅವರನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯನ್ನಾಗಿ ಸರ್ಕಾರ ನೇಮಿಸಿದೆ. ಈಗ ಪತಿ ನಿವೃತ್ತರಾದ ಹುದ್ದೆಯನ್ನು ಪತ್ನಿಯೇ ಅಲಂಕರಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ನಡೆದಿದೆ. ಆದರೆ ಪತಿಯ ನಿವೃತ್ತಿಯ ನಂತರ ಅದೇ ಸ್ಥಾನದಲ್ಲಿ ಪತ್ನಿ ಆಗಮಿಸಿದ್ದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ.