ಪತ್ನಿಗೆ ಗಂಭೀರ ಹಲ್ಲೆ ನಡೆಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿರಾಯ

khushihost

ಚಂದ್ರವಳ್ಳಿ ನ್ಯೂಸ್,ಶಿವಮೊಗ್ಗ : ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ನಂತರ ಪಟಗುಪ್ಪ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೋಡೂರು ಗ್ರಾಮದ ಸದಾನಂದ ಭಟ್ ಮತ್ತು ಪತ್ನಿ ಸವಿತಾ ನಡುವೆ ಗುರುವಾರ ಕೌಟುಂಬಿಕ ಕಾರಣಗಳಿಗಾಗಿ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದನು.

ತಲೆಗೆ ತೀವ್ರವಾದ ಗಾಯವಾದ ಹಿನ್ನೆಲೆಯಲ್ಲಿ ಸಬೀತಾ ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಿಪ್ಪನ್‌ಪೇಟೆ ಪೊಲೀಸರು ಆರೋಪಿ ಸದಾನಂದ ಭಟ್ ಗೆ ಶೋಧ ನಡೆಸಿದಾಗ ಆತನ ಕಾರು ಪಟಗುಪ್ಪ ಸೇತುವೆ ಬಳಿ ಕಂಡುಬಂದಿದೆ. ಆದರೆ ಆತನ‌ ಸುಳಿವು ಸಿಕ್ಕಿರಲಿಲ್ಲ ನಂತರ ಕಾರನ್ನು ಹೊಸನಗರ ಪೊಲೀಸರು ವಶಪಡಿಸಿಕೊಂಡಿದ್ದರು.

ಶುಕ್ರವಾರ ಬೆಳಿಗ್ಗೆ ಆರೋಪಿ ಸದಾನಂದ ಭಟ್ ಮೃತ ದೇಹ ಪಟಗುಪ್ಪ ಸೇತುವೆ ಬಳಿಯಲ್ಲಿ ಪತ್ತೆಯಾಗಿದೆ. ಶವ ಮೇಲೆತ್ತಿ ಮಹಜರು ನಡೆಸಿ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಹಾಗೂ ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

- Advertisement -  - Advertisement -  - Advertisement - 
Share This Article
error: Content is protected !!
";