ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯಿಂದಲೇ ಪತಿ ಕೊಲೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಸೆ.27ರಂದು ಮನೆಯಲ್ಲಿ ಹೊಟ್ಟೆನೋವಿನಿಂದ ಮೃತಪಟ್ಟ ರಾಘವೇಂದ್ರ(೩೫)ನ ಸಾವು ಸಹಜಸಾವಲ್ಲದೆ, ಕೊಲೆ ಎಂದು ತಿಳಿದುಬಂದಿದೆ.

ಸೆ.೨೭ರಂದು ಮಧ್ಯಾಹ್ನ ಮೃತ ರಾಘವೇಂದ್ರನ ಹೆಂಡತಿ ದಿವ್ಯ(೩೦) ದೂರವಾಣಿ ಮೂಲಕ ನಿನ್ನ ತಮ್ಮ ಹೊಟ್ಟೆನೋವು ಎಂದು ಮನೆಯಲ್ಲಿ ನರಳಾಡುತ್ತಿದ್ದಾನೆಂದು ತಿಳಿಸಿದಾಗ ಮೃತನ ಸಹೋದರ ತಿಪ್ಪೇಸ್ವಾಮಿ, ಬಂಧುಗಳು ಮನೆಗೆ ಹೋಗಿ ನೋಡುವಷ್ಟರಲ್ಲಿ ರಾಘವೇಂದ್ರ ಮೃತಪಟ್ಟಿದ್ದ, ನಂತರ ಸ್ಥಳಕ್ಕೆ ಆಗಮಿಸಿದ ತಿಪ್ಪೇಸ್ವಾಮಿ ಅಂತ್ಯಕ್ರಿಯೆ ನಡೆಸಲು ಮೃತನ ಶರೀರಕ್ಕೆ ಸ್ನಾನ ಮಾಡಿಸಲು ಯತ್ನಿಸುವ ಸಂದರ್ಭದಲ್ಲಿ ಪತ್ನಿ ದಿವ್ಯ ಆಕ್ಷೇಪ ವ್ಯಕ್ತಪಡಿಸಿದಳು.

ಈ ಸಂದರ್ಭದಲ್ಲಿ ಮೃತ ರಾಘವೇಂದ್ರನ ಕುತ್ತಿಗೆಯಲ್ಲಿ ದಾರ ಕಂಡು ಬಂದಿದ್ದು, ಅನುಮಾನಗೊಂಡ ಕೆ.ಒ.ತಿಪ್ಪೇಸ್ವಾಮಿ ತಳಕು ಠಾಣೆಗೆ ದೂರು ನೀಡಿ, ಅಂತ್ಯಕ್ರಿಯೆ ಪೂರೈಸಿದರು.

ಆದರೆ, ಮೃತ ರಾಘವೇಂದ್ರನ ಮರಣೋತ್ತರ ವರದಿ ನೋಡಿದಾಗ ರಾಘವೇಂದ್ರನನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿ ರಾಘವೇಂದ್ರನ ಕೊಲೆಗೆ ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ(೫೦) ಹಾಗೂ ರಾಜು(೩೦) ಎಂಬ ವ್ಯಕ್ತಿ ಕಾರಣ ಎಂದು ದೂರು ನೀಡಿದ್ದಾನೆ.

ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ  ಒಳಪಡಿಸಿದಾಗ ದಿವ್ಯ ಪ್ರಿಯಕರ ರಾಜು ಮತ್ತು ಚಿಕ್ಕಪ್ಪ ಮಾರಣ್ಣನ ಸಹಕಾರದೊಂದಿ ಕೊಲೆ ಮಾಡಿರುವುದು ತಿಳಿಸಿದ್ದಾಳೆ.

ಮೃತ ರಾಘವೇಂದ್ರ ಮತ್ತು ಆತನ ಪತ್ನಿ ದಿವ್ಯ ಒಂದೇ ಗ್ರಾಮದವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಕಿಶೋರ್ ಮತ್ತು ಅಖಿಲ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. 

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ ಕುಮಾರ್ ಬಂಡಾರು, ಡಿವೈಎಸ್ಪಿ ಟಿ.ಬಿ.ರಾಜಣ್ಣ, ವೃತ್ತ ನಿರೀಕ್ಷಕ ಹನುಮಂತಪ್ಪಸಿರಿಹಳ್ಳಿ, ಪಿಎಸ್‌ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";