ಕಿತ್ತೂರು ಚೆನ್ನಮ್ಮ ಹಾಗೂ ಬೆಳವಡಿ ಮಲ್ಲಮ್ಮ ಇವರುಗಳ ಆದರ್ಶ ಪಾಲಿಸಿ: ಶಂಕರ ಬಿದಿರಿ 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳವಡಿ ಮಲ್ಲಮ್ಮ ಹಾಗೂ ಕಿತ್ತೂರು ಚೆನ್ನಮ್ಮ ಈ ನಾಡಿನ ಸರ್ವಶ್ರೇಷ್ಠ ಹೋರಾಟಗಾರ್ತಿಯಾಗಿದ್ದು, ಅವರ ಬದುಕು, ಜೀವನ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದಿರಿ ಕರೆ ನೀಡಿದ್ದಾರೆ.

ಲಗ್ಗೆರೆಯಲ್ಲಿ ನೀಲೆ ಫೌಂಡೇಷನ್ ನಲ್ಲಿ ಭಾರತಿ ದರ್ಶ್ ಫೌಂಡೇಶನ್ ನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಂಗವಾಗಿ ಬೆಳವಡಿ ಮಲ್ಲಮ್ಮ ಹಾಗೂ ಕಿತ್ತೂರು ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾಡಿನ ಕೆಚ್ಚೆದೆಯ ಹೋರಾಟಗಾರ್ತಿಯರ ಬದುಕು, ಹೋರಾಟವನ್ನು ಅಧ್ಯಯನ ಮಾಡಬೇಕು. ಅವರ ಆದರ್ಶ  ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಮ್ಮ ನಾಡಿನ ಭ್ಯ ಪರಂಪರೆಯನ್ನು ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು.

- Advertisement - 

ಇದೇ ಸಂದರ್ಭದಲ್ಲಿ ಎಲ್.ಬಿ.ಎಸ್ ಆಟೋಮೇಷನ್ ಸಿಸ್ಟಮ್ ಮಾಲೀಕ  ಬಸವರಾಜು ಎನ್.ಕೆ. ಅವರು ಭಾರತಿ ದರ್ಶ್ ಫೌಂಡೇಶನ್ ಗೆ ಆಂಬುಲೆನ್ಸ್ ಅನ್ನು ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಶೈಲೇಂದ್ರ ಪಾಟೀಲ್, ಪ್ರಮೋದ್ ಪಾಟೀಲ್, ಉಮೇಶ್ ಬಣಕಾ‌ರ್ಡಾ.ರಾಜಶ್ರೀ ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement - 

Share This Article
error: Content is protected !!
";