ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂನ ಸೊಂಡೇಕೆರೆ ಗ್ರಾಮದ ಶ್ರೀ ಕೆಂಚಾಂಬದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ದೇವಿಯ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನಾ ಸಮಾರಂಭವನ್ನು ಫೆ.9, 10 ಮತ್ತು 11 ರಂದು ಸೊಂಡೇಕೆರೆ ಗ್ರಾಮದಲ್ಲಿ ಶ್ರೀ ಕೆಂಚಾಂಬ ದೇವಿ, ಶ್ರೀ ಕೊಲ್ಲಾಪುರದ ಮಹಾಲಕ್ಷ್ಮೀ, ಶ್ರೀ ಗೌರಸಂದ್ರ ಮಾರಮ್ಮ ದೇವಿಯವರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವನ್ನು ಶ್ರೀ ಕೆಂಚಾಂಬದೇವಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಫೆ.9 ರ ಭಾನುವಾರ ಸಂಜೆ 6 ಘಂಟೆಯಿಂದ ಯಾಗಶಾಲಾಪ್ರವೇಶ, ಗಂಗಾಪೂಜೆ, ಗಣಪತಿಪೂಜೆ, ಭಗವತ್ರುಣ್ಯಾಹ ಪಂಚಗವ್ಯ ಪೂಜನ, ದೇವನಾಂದಿ, ರಾಕ್ಷಘ್ನ ಪಾರಾಯಣ, ಸೂತ್ರಪೂಜೆ, ಕಂಕಣಧಾರಣೆ, ಗಣಪತಿ ಹೋಮ, ವಾಸ್ತುಹೋಮ, ಲಘು ಪೂರ್ಣಾಹುತಿ, ಬಲಿಹರಣ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಫೆ.10ರ ಸೋಮವಾರ ಬೆಳಿಗ್ಗೆ 6 ಘಂಟೆಗೆ ದೀಪಾರಾಧನೆ, ವೇದ ಪಾರಾಯಣ, ಕಳಸ ಸ್ಥಾಪನೆ, ನವಗ್ರಹಾರಾಧನೆ, ಮೃತಂಗ್ರಹ, ಅಂಕುರಾರ್ಪಣೆ, ರಕ್ಷಾಸೂತ್ರ ಪೂಜೆ, ಧ್ವಜಾರೋಹಣ, ಬಿಂಬಶುದ್ಧಿ, ಮಹಾಸ್ವಪನ, ಸ್ವಪನಹೋಮ, ಗಣಹೋಮ, ನವಗ್ರಹಹೋಮ, ತತ್ತದ್ವಿಹಿತ ಹೋಮಾದಿಗಳು, ಉತ್ಸವಮೂರ್ತಿ ಪೂಜೆ, ಗ್ರಾಮೋತ್ಸವ, ಬಲಿಹರಣ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 12 ರಿಂದ ಶ್ರೀ ಕೆಂಚಾಂಬದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಶ್ರೀ ವೀರೇಂದ್ರ ಹೆಗಡೆಯವರು, ಸದ್ಗುರು ಶ್ರೀ ಡಾ. ವಾಸುದೇವಾನಂದ ಸರಸ್ವತೀ ಸ್ವಾಮಿಗಳು ಭಾಗವಹಿಸಲಿದ್ದಾರೆ.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶ್ರೀ ಕೆಂಚಾಂಬದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎಸ್.ಎ. ಜಯಣ್ಣ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಡಾ. ಎಂ. ಚಂದ್ರಪ್ಪ, ಕೆ.ಸಿ. ವೀರೇಂದ್ರ(ಪಪ್ಪಿ) ಇವರುಗಳು ಪಾಲ್ಗೊಳ್ಳಲಿದ್ದಾರೆ.
ಸಂಜೆ 5.00 ಘಂಟೆಗೆ ದೀಪಾರಾಧನೆ, ವೇದಪಾರಾಯಣ, ಮಹಾಮಂಗಳಾರತಿ, ಬಲಿಹರಣ, ಬಿಂಬಸ್ಥಾಪನೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.
ಫೆ.11ರ ಮಂಗಳವಾರ ಬೆಳಗಿನ ಜಾವ ಬ್ರಾಹ್ಮ ಮುಹೂರ್ತದಲ್ಲಿ ಶ್ರೀ ಕೆಂಚಾಂಬದೇವಿ, ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ, ಶ್ರೀ ಗೌರಸಂದ್ರ ಮಾರಮ್ಮ ದೇವಿಯವರ ನೇತ್ರೋಲನ, ಪ್ರಾಣಪ್ರತಿಷ್ಠೆ, ಅಗ್ನಿದರ್ಶನ, ಗೋಪುರ ಕಲಶ ಸ್ಥಾಪನೆ, ಪ್ರತಿಷ್ಠಾ ಹೋಮಗಳು, ಪ್ರತಿಷ್ಠಾ ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ, ಸುವಾಸಿನಿ ಪೂಜೆ, ಕುಮಾರಿ ಪೂಜೆ, ಆಶೀರ್ವಾದ ತೀರ್ಥಪ್ರಸಾದ ವಿನಿಯೋಗ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.