ಜಿಪಂ, ತಾಪಂ, ಬಿಬಿಎಂಪಿ, ಚುನಾವಣೆಗಳ ತಲೀಮು ನಡೆಸಿದ ಜೆಡಿಎಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಪಕ್ಷ ಸಂಘಟನೆ ಹಾಗೂ ಮುಂಬರುವ ಬಿಬಿಎಂಪಿ
, ತಾಲೂಕು & ಜಿಲ್ಲಾ ಪಂಚಾಯತಿ ಚುನಾವಣೆ ಸಿದ್ಧತೆಗಳ ಬಗ್ಗೆ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಿ ಗಂಭೀರ ಚರ್ಚಿಸಲಾಯಿತು.

ಈ  ಸಂದರ್ಭದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕರಾದ ಶಿವರಾಜ್, ಜೆಡಿಎಸ್ ಮುಖಂಡರಾದ ಜಗದೀಶ್, ಶೈಲಜಾ ರಾವ್, ಪಾಲಿಕೆ ಮಾಜಿ ಸದಸ್ಯರಾದ ಮುನಿಸ್ವಾಮಿ, ಅಂದಾನಪ್ಪ, ನಂದಾ ಸಿಂಗ್, ತಾರಾ ಲೋಕೇಶ್, ವೇಣುಗೋಪಾಲ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

 

 

 

- Advertisement -  - Advertisement - 
Share This Article
error: Content is protected !!
";