ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆಡಳಿತ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಜಿಲ್ಲಾ ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವತಿಯಿಂದ ತಾಲೂಕ್ ಕಚೇರಿಯಲ್ಲಿ ಹಿಂದೆ ಗ್ರೇಡ್-2 ತಹಸೀಲ್ದಾರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಕೆ.ನೇತ್ರಾವತಿ ರವರು ಈಗ ಕೂಡ್ಲಿಗಿ ತಾಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಾಗಿ ನೇಮಕಗೊಂಡು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡ್ಲಿಗಿ ತಾಲೂಕಿನ ಕಾಡುಗೊಲ್ಲ ಸಮಾಜದ ವತಿಯಿಂದ ತಾಲೂಕು ಕಚೇರಿಯಲ್ಲಿ ಅಭಿನಂದನ ಪೂರಕವಾಗಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಂಘದ ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷ ಎಸ್ .ಸಣ್ಣ ಬಾಲಪ್ಪ, ತಾಲೂಕು ಅಧ್ಯಕ್ಷ ಜಿ.ಎಸ್ ದೊಡ್ಡಪ್ಪ, ಉಪಾಧ್ಯಕ್ಷ ಸಣ್ಣಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎನ್. ವಿರೂಪಾಕ್ಷಪ್ಪ ಖಜಾಂಚಿ, ಗೌಡ ಚಿಕ್ಕಪ್ಪ ಸಂಘಟನಾ ಕಾರ್ಯದರ್ಶಿ ರವಿ, ಸಿದ್ದೇಶ್ , ನಿಂಗಪ್ಪ, ಜಿ.ಸಿ ರಂಗಸ್ವಾಮಿ, ಸಿದ್ದನಟ್ಟಿ ದೊಡ್ಡಪ್ಪ, ಗೋವಿಂದ, ಗಿರಿ, ಸಣ್ಣಬಡಪ್ಪ, ಕಾರ್ಯದರ್ಶಿ ದೊಡ್ಡಪ್ಪ ಹಾಗೂ ಸಮುದಾಯದ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

