ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನಪೀಡಕ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಕರುಣೆಯೇ ಇಲ್ಲ ! ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಬೆಂಗಳೂರಲ್ಲಿ ಕಸ ಸಂಗ್ರಹಕ್ಕೂ ಶುಲ್ಕದ ಬರೆ ಹಾಕಿರುವ ಸಿದ್ದರಾಮಯ್ಯ ಸರ್ಕಾರ, ಈಗ ಮನೆಗಳ ಮುಂದೆ ಬೈಕ್, ಕಾರು, ವಾಹನಗಳನ್ನು ನಿಲ್ಲಿಸಿದರೂ ನೀವು ಟ್ಯಾಕ್ಸ್‌ಕಟ್ಟಬೇಕಾಗಿದೆ ಎಂದು ಹೇಳುವ ಮೂಲಕ ಜನ ಸಾಮಾನ್ಯರ ಪೀಡಿಕ ಸರ್ಕಾರವಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಾ ಬಂದರೂ ಕಾಂಗ್ರೆಸ್ ಸರ್ಕಾರದ ಯೋಗ್ಯತೆಗೆ ಬೆಂಗಳೂರಿನ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಇನ್ನೂ ಸಾಧ್ಯವಾಗಿಲ್ಲ.
ಅದರೆ “ದರಾಸುರ”ರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ಹೊಡೆಯುವ ಮೂಲಕ ರಾಜಧಾನಿಯ ಜನರ ನಿದ್ದೆ ಗೆಡಿಸುತ್ತಲೇ ಇದ್ದಾರೆ ಜೆಡಿಎಸ್ ತಿಳಿಸಿದೆ.