ದೀಪ ತ್ಯಾಗದ ಸಂಕೇತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೀಪವು ತಾನೇ ಉರಿದು ಬೆಳಕು ಕೊಡುವ ಹಾಗೆ ಅದೆಷ್ಟೋ ಮಂದಿ ತಮ್ಮ ಜೀವನದ ಸಾಗುವಳಿಯಲ್ಲಿ ಲಾಭ ನಷ್ಟಗಳನ್ನು ಲೆಕ್ಕಿಸದೇ ವಿಶ್ವಾಸದ ಸಲುವಾಗಿ ಜೀವನವನ್ನೇ ತ್ಯಾಗ ಮಾಡುವವರನ್ನು ನೋಡಬಹುದು .  ಇನ್ನೂ ಕೆಲವರ ಮನಸ್ಥಿತಿಯಲ್ಲಿ ತ್ಯಾಗವೇ ಇಲ್ಲದೆ  ಸ್ವಾರ್ಥವೇ  ಹೆಚ್ಚಾಗಿ ನಾನೇ ಪ್ರಾಮಾಣಿಕ ಎಂಬಂತೆ ತೋರ್ಪಡಿಸುವ ವ್ಯಕ್ತಿತ್ವಕ್ಕೆ ಯಾವತ್ತಿಗೂ ಬೆಳಕೇ ಇಲ್ಲದೆ ಕಾರ್ಗತ್ತಲು ಆವರಿಸಿರುತ್ತದೆ.

 ಜೀವನದ ಅದೆಂತಹ ಸಂದರ್ಭದಲ್ಲಿಯೂ ನ್ಯಾಯ. ನೀತಿ. ಸತ್ಯ. ಧರ್ಮಗಳ ಪಾಲನೆಯಲ್ಲಿ ಸಾಗಿದಾಗ ಮಾತ್ರವೇ ಮನುಷ್ಯರಿಗೆ ಎಲ್ಲಾ ತರಹದಲ್ಲಿ ಸಮಾಧಾನ  ತರುವುದು ಇದು ಸತ್ಯದ ಸಂಗತಿ.

ಮನುಷ್ಯ ಇತ್ತರರ ಬದುಕಿನಲ್ಲಿ ದೀಪದಂತೆ ಬೆಳಕು ಚೆಲ್ಲಿ ದೀಪಾ ದಂತೆ ತ್ಯಾಗಿ  ಆಗಲು ಸಾಧ್ಯ ಇಲ್ಲದಿರಬಹುದು. ಮತ್ತೊಬ್ಬರ ಬದುಕನ್ನು ಹಾಳುಗೆಡವಿ ಅವರ ಬದುಕಿನ ಬೆಳಕನ್ನು ಹಾರಿಸಬಾರದು. ಈ ವಿಚಾರವನ್ನು ಗಮನಿಸಿದ ಎಲ್ಲರಿಗು ಬೆಳಕಿನ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಲೇಖನ-ರಘು ಗೌಡ 9916101265

 

- Advertisement -  - Advertisement -  - Advertisement - 
Share This Article
error: Content is protected !!
";