ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರ ಬದುಕು ಹಸನಾಗಿಸಿ ನಾಡಿನ ಅಭಿವೃದ್ಧಿಗೆ ವ್ಯವಸ್ಥಿತ ಅಡಿಪಾಯ ಹಾಕಿದ್ದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ್ದ ಶಾಲೆಯ ಜಾಗದ ಪಹಣಿಯಲ್ಲೂ ವಕ್ಫ್ ಆಸ್ತಿ ಉಲ್ಲೇಖವಾಗಿರುವುದು ದೌರ್ಭಾಗ್ಯದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ವಕ್ಫ್ ಸಂಸ್ಥೆಯ ಜನವಿರೋಧಿ ಕಾಯ್ದೆ ರದ್ದುಪಡಿಸದಿದ್ದರೆ ಮಿತಿಮೀರಿರುವ ತುಷ್ಟೀಕರಣದ ವಿರುದ್ಧ ಜನಾಕ್ರೋಶದ ಜ್ವಾಲೆ ‘ಕೈ‘ ಸರ್ಕಾರವನ್ನು ಸುಡಲಿದೆ ಎಂದು ಅವರು ಎಚ್ಚರಿಸಿ ಟ್ವೀಟ್ ಮಾಡಿದ್ದಾರೆ.