ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರಿಗೆ ಆ ಸ್ಥಾನ ಸಿಕ್ಕಿರುವುದು, ರಾಜ್ಯದ ಆಗುಹೋಗುಗಳ ಬಗ್ಗೆ, ಸರ್ಕಾರದ ಕೆಲಸಗಳ ಬಗ್ಗೆ ಟೀಕೆ, ಟಿಪ್ಪಣಿ ಮಾಡುವುದಕ್ಕಲ್ಲ, ಬದಲಿಗೆ ನನ್ನ ಮೇಲೆ ವಯಕ್ತಿಕ ಟೀಕೆ ಮಾಡುವುದಕ್ಕಾಗಿ! ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಎಲ್ಲಿಯವರೆಗೂ ನಾರಾಯಣಸ್ವಾಮಿ ಅವರು ಖರ್ಗೆಯವರನ್ನು ಹಾಗೂ ನನ್ನನ್ನು ಟೀಕೆ ಮಾಡುತ್ತಿರುತ್ತಾರೊ ಅಲ್ಲಿಯವರೆಗೂ ಮಾತ್ರ ಅವರು ವಿರೋಧ ಪಕ್ಷದ ನಾಯಕರಾಗಿರುತ್ತಾರೆ! ಎಂದು ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಬಿಜೆಪಿಯವರು ಕಳೆದ ನಾಲ್ಕೈದು ದಿನದಿಂದ ತಮ್ಮ ಹೈ ಕಮಾಂಡ್ ಮೆಚ್ಚಿಸುವ, ನನ್ನ ರಾಜೀನಾಮೆ ಕೊಡಿಸುವ, ಮಲ್ಲಿಕಾರ್ಜುನ ಖರ್ಗೆಯವರ ಹೆಸರಿಗೆ ಕಪ್ಪು ಚುಕ್ಕೆ ತರುವಂತಹ ಸಂಚು ನಡೆಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ.