ವಿಸ್ತಾರವಾಗುತ್ತಲೇ ಇದೆ ಬಸವ ತತ್ವದ ಬೆಳಕು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವಣ್ಣನವರ ವಚನ ಪ್ರಚಾರದ ನಾದ ಈಗ ಪಂಜಾಬ್
, ಹರಿಯಾಣ ಉತ್ತರಾಖಂಡದಲ್ಲಿ ಮೊಳಗುತ್ತಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ಸಂಗತಿ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶ್ರೀ ಪಂಡಿತರಾವ್ ಧರೆನ್ನವರ ಅವರು ಬಸವ, ಅಲ್ಲಮ, ಹಾಗೂ ಅಕ್ಕಮಹಾದೇವಿಯವರ ವಚನಗಳನ್ನು ಪಂಜಾಬಿ ಭಾಷೆಗೆ ಅನುವಾದಿಸಿ ಶರಣರ ತತ್ವಗಳನ್ನು ಪಸರಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ. 

- Advertisement - 

ಸಮಾನತೆ, ಬಾಂಧವ್ಯ, ಮಾನವೀಯತೆ ಹಾಗೂ ಶ್ರದ್ಧೆಯ ಮೌಲ್ಯಗಳನ್ನು ಸಾರುವ ವಚನ ಸಾಹಿತ್ಯದ ಸುವಾಸನೆ ದೇಶದ ಹೃದಯಕ್ಕೆ ತಲುಪುತ್ತಿದೆ. ಕೋಪದ ಕೈಗೆ ಮನಸ್ಸು ಕೊಟ್ಟು ಜೈಲುಪಾಲಾದ ಹಲವರ ಮನಃಪರಿವರ್ತನೆಗೂ ಈ ವಚನಗಳು ಪ್ರೇರಣೆಯಾಗುತ್ತಿರುವುದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀ ಪಂಡಿತರಾವ್ ಧರೆನ್ನವರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಈ ಮಹತ್ತರ ಕಾರ್ಯ ಮುಂದುವರೆಯಲಿ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.  

- Advertisement - 

 

 

 

Share This Article
error: Content is protected !!
";