ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರು ತಾಯ್ತನದ ಬೆಳಕು ಎಂದು ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎನ್. ಮುರಳೀಧರ ಅಭಿಪ್ರಾಯಪಟ್ಟರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀಮಾತೆ ಶಾರದಾದೇವಿಯವರ 173ನೇ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅನಂತರೂಪಿಣಿ ಅನಂತ ಗುಣವತಿಯಾಗಿ ಶ್ರೀರಾಮಕೃಷ್ಣರು ಹೇಳಿದಂತೆ ಸಾಕ್ಷಾತ್ ಜ್ಞಾನದಾಯಿಕೆಯಾದ ಶ್ರೀಶಾರದಾದೇವಿಯವರು ಮಾತೃತ್ವದ ಸಾಕಾರ ಮೂರ್ತಿಯಾಗಿದ್ದು ಅವರು ಶಿಷ್ಟರು ಮತ್ತು ದುಷ್ಟರ ತಾಯಿಯೂ ಆಗಿದ್ದರು.ಅವರ ಜೀವನ-ಸಂದೇಶಗಳು ಅವರ ತಾಯ್ತನದ ಮೇಲೆ ಬೆಳಕು ಚೆಲ್ಲುತ್ತವೆ ಎಂದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಜಯಂತ್ಯುತ್ಸವ ಸತ್ಸಂಗದಲ್ಲಿ ಮಾತಾಜೀ ತ್ಯಾಗಮಯೀ, ವೀರೇಶ್, ಮಹೇಶ್, ನೇತಾಜಿ ಪ್ರಸನ್ನ,ಬಸವರಾಜ್, ಎಂ ಗೀತಾ ನಾಗರಾಜ್, ಜಗದಂಬಾ, ತೊಯಜಾಕ್ಷಿ, ಟಿ.ಎಂ.ವಿಜಯಾಗುರು, ಗೀತಾ ವೆಂಕಟೇಶ್,ಅಂಬುಜಾ, ಚೆನ್ನಕೇಶವ, ಯತೀಶ್ ಎಂ ಸಿದ್ದಾಪುರ,ಋತಿಕ್, ಸಂಜನಾ,ಕಲ್ಪನಾ, ವಾಸವಿ,
ನಳಿನಿ,ಲತಾ, ವೆಂಕಟಲಕ್ಷ್ಮೀ, ಲೀಲಾವತಿ, ಆರ್.ಗೋವಿಂದಶೆಟ್ಟಿ, ನಾಗರತ್ನಮ್ಮ , ಶಾರದಾಮ್ಮ, ವೀರಮ್ಮ, ಸಂಗೀತ, ಕೃಷ್ಣವೇಣಿ, ಶೈಲಜಾ, ಅಂಬಿಕಾ ಪರಮೇಶ್ವರ್, ಗೀತಾ ಪ್ರಕಾಶ್, ಶೋಭಾ, ಚೇತನ್, ಸಂತೋಷ್, ಡಾ.ಭೂಮಿಕಾ, ಸರಸ್ವತಿ ಪಾಂಡು, ಗೀತಾ ಭಕ್ತವತ್ಸಲ, ಪುಷ್ಪಲತಾ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರಿದ್ದರು.

