ಮಾನವೀಯ ವ್ಯಕ್ತಿತ್ವದ ಶ್ರೇಷ್ಠತೆ ಉಳಿಸಿಕೊಂಡ ಪ್ರೀತಿಯ ಅಪ್ಪು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನವೀಯ ವ್ಯಕ್ತಿತ್ವವೇ ಶ್ರೇಷ್ಠ. ಪುನಿತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಪವರ್ ಸ್ಟಾರ್ಎಂದು ಖ್ಯಾತಿ ಪಡೆದಿದ್ದ ನಾಯಕ ನಟ. ಅಭಿಮಾನಿಗಳಿಗೆ ಪ್ರೀತಿಯ ಅಪ್ಪು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಇವರ 50ನೇ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.

ಪುನಿತ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿ ಸತ್ಯದ ನುಡಿಗಳಲ್ಲಿ ಹಾಗೂ ದಾನ ಧರ್ಮಗಳಲ್ಲಿ ಮಾನವ ಕುಲಕ್ಕೆ ಮಾದರಿಯಾಗಿ ಕಂಡು ಬಂದಿದ್ದರು ಎಂದು ಹೆಮ್ಮೆಯಿಂದ ಹೇಳಬಹುದು. ನಾಗರಿಕ ಸಮಾಜದಲ್ಲಿ ಹುಟ್ಟಿದ ಮನುಷ್ಯರು ಮೋಸ ಸುಳ್ಳುಗಳ ಸ್ವಾರ್ಥದಲ್ಲಿ ಇತರರಿಗೆ ತೊಂದರೆ ಕೊಡದಂತೆ ಬದುಕುವುದೇ ಮಾನವ ಜನ್ಮಕ್ಕೆ ಸಾರ್ಥಕತೆ ಎಂದು ಜಗತ್ತಿಗೆ ಸಾರಿದ ಪರಮಾತ್ಮ. ಪುನೀತ್ ಅವರ ಬದುಕು ಮಾನವ ಕುಲಕ್ಕೆ ಆದರ್ಶವಾಗಿದೆ.

ಏನಾದರೂ ಹಾಗೂ ಮೊದಲು ಮಾನವನಾಗು. ಇದು ಭಗವಂತನ ಸಂಕಲ್ಪದ ನುಡಿಮುತ್ತುಗಳು ಆಗಿದೆ ಎಂದು ಅಪ್ಪು ಅಭಿಮಾನಿ ರಘು ಗೌಡರ ಅಭಿಪ್ರಾಯವಾಗಿದೆ.

- Advertisement -  - Advertisement - 
Share This Article
error: Content is protected !!
";