ಹಿರಿಯೂರು ಟೌನ್ ಕೃಷಿ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ ಮಾಡಿದ ಸ್ನೇಹಿತರ ಪ್ರೀತಿಗೆ ಬೆಲೆ ಕಟ್ಟಲಾಗದು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-2025 ರಿಂದ 2030ರ ಅವಧಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಸಾಮಾನ್ಯ ಕ್ಷೇತ್ರಕ್ಕೆ ನನ್ನನ್ನು ಅವಿರೋಧ ಆಯ್ಕೆ ಮಾಡುವ ಮೂಲಕ ಅಪಾರ ಪ್ರೀತಿ ವ್ಯಕ್ತಪಡಿಸಿದ ನನ್ನೆಲ್ಲ ಸ್ನೇಹಿತರಿಗೆ ಧನ್ಯವಾದಗಳು.

ನನ್ನ ಆತ್ಮೀಯ ಸ್ನೇಹಿತ ಹೆಚ್.ನಾಗರಾಜ್ ಅವರು ಎರಡು ಮೂರು ವರ್ಷಗಳಿಂದೆಯೇ ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸ್ಪರ್ಧಿಸಬೇಕು ಎಂದು ತಾಕೀತು ಮಾಡಿದ್ದರು. ಅದರಂತೆ ನಾನು ಅರ್ಜಿ ಸಲ್ಲಿಸಿದೆ.

ಅರ್ಜಿ ಸಲ್ಲಿಸಿದ ನಂತರ ಮಾಜಿ ನಗರಸಭಾ ಸದಸ್ಯ ಸುಬ್ರಮಣ್ಯಿಂ, ಬ್ಯಾಂಕಿನ ಹಾಲಿ ಅಧ್ಯಕ್ಷ ಪಿ.ಎಸ್.ಸಾದತ್ ವುಲ್ಲಾ, ಎಂ.ಡಿ ಸಣ್ಣಪ್ಪ ಅವರು ಸೇರಿದಂತೆ ಮತ್ತಿತರ ಸ್ನೇಹಿತರು ನನ್ನ ಅನುಪಸ್ಥಿತಿಯಲ್ಲಿ ಹರಿಯಬ್ಬೆ ಹೆಂಜಾರಪ್ಪ ಅವರು ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-2025 ರಿಂದ 2030ರ ಅವಧಿಗೆ ನಿರ್ದೇಶಕರಾಗಿ ಇರಲೇಬೇಕು ಎಂದು ಬದ್ಧತೆಯಿಂದ ನನ್ನನ್ನು ಅವಿರೋಧ ಆಯ್ಕೆ ಮಾಡಿದ್ದಾರೆ. ಅವರ ಅಭಿಮಾನ ಪೂರಕ ಆಯ್ಕೆಗೆ ಬೆಲೆ ಕಟ್ಟಲಾಗದು. ಹಾಗಾಗಿ ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸುಬ್ರಮಣ್ಯಿಂ, ಪಿ.ಎಸ್.ಸಾದತ್ ವುಲ್ಲಾ, ಎಂ.ಡಿ ಸಣ್ಣಪ್ಪ ಮತ್ತು ಇತರೆ ಸ್ನೇಹಿತರೆಲ್ಲ ಸೇರಿ ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವತೋಮುಖ ಅಭಿವೃದ್ಧಿಗೆ, ರೈತರ ಏಳ್ಗೆಗೆ ಪ್ರಮಾಣಿಕವಾಗಿ ಸೇವೆ ಮಾಡುತ್ತೇವೆ ಎನ್ನುವ ಭರವಸೆ ನೀಡುವೆ. ಇಂತಿ ನಿಮ್ಮ ಪ್ರೀತಿಯ ಹರಿಯಬ್ಬೆ ಸಿ.ಹೆಂಜಾರಪ್ಪ, ಹಿರಿಯೂರು.

 

Share This Article
error: Content is protected !!
";