ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ಯುವಪ್ರತಿಭೆ ರಘುರಾಮ್ ನಾಯಕನಾಗಿ ನಟಿಸುತ್ತಿರುವ ಶ್ರೀ ದುರ್ಗಾ ಸೆಕ್ಯೂರಿಟಿ ಸರ್ವಿಸ್ ಅರ್ಪಿಸುವ ಚೊಚ್ಚಲ ಚಲನಚಿತ್ರ ಮಾಯಾವಿ ಶೀಘ್ರದಲ್ಲೇ ತೆರೆಗೆ ಬರಲಿದೆ.
ಸಸ್ಪೆನ್ಸ್ ,ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಪ್ರೇಮ ಕಥಾ ಹಂದರದ ಈ ಚಿತ್ರ ಪೋಸ್ಟಪ್ರೊಡಕ್ಷನ್ ಎಲ್ಲ ಕಾರ್ಯ ಮುಗಿಸಿದ್ದು ಸೆನ್ಸಾರ್‌ಗೆ ಹೊರಡಲು ಸಿದ್ದವಾಗಿದೆ.
ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರು ಮೊದಲಾದ ಕಡೆ ಇಪ್ಪತೈದು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿವೆ. ಈಗಾಗಲೇ ಆಡಿಯೋ ಮತ್ತು ಪೋಸ್ಟರ್ ಲಾಂಚ್ ಮಾಡಲಾಗಿದೆ . ಮನೆಮಂದಿಯೆಲ್ಲ ಇಷ್ಟಪಟ್ಟು ನೋಡಬಹುದಾದ ಚಿತ್ರವಾಗಿದ್ದು ಯುವ ಪ್ರತಿಭೆಗಳನ್ನು ಪ್ರೇಕ್ಷಕರು, ಮಾಧ್ಯಮ ಬಂಧುಗಳು ಪ್ರೋತ್ಸಾಹಿಸಬೇಕು ಎಂದು ನಾಯಕನಟ ರಘುರಾಮ ತಿಳಿಸಿದ್ದಾರೆ.
ಚಿತ್ರದಲ್ಲಿ ನಾಯಕರಾಗಿ ರಘುರಾಮ್, ನಾಯಕಿಯಾಗಿ ನಿಶ್ಚಿತಾಶೆಟ್ಟಿ, ಎಂ.ಕೆ.ಮಠ, ಸುರೇಶಬಾಬು, ಸೂರ್‍ಯಪ್ರವೀಣ, ಶಿಲ್ಪಾ , ಅನುರಾಧಾ, ಖುಷಿಗೌಡ ಮೊದಲಾದವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಗುರುದತ್ ಮುಸುರಿ, ಚಿತ್ರಕಥೆ-ಸಂಭಾಷಣೆ ಶಂಕರ.ಜಿ, ಅಕ್ಷತಾ ಚಕ್ರಸಾಲಿ, ಸಂಕಲನ-ವಿಎಫ್ ಎಕ್ಷ್ ,ಡಿಐಆರ್. ಅನಿಲಕುಮಾರ್, ಹಿನ್ನೆಲೆ ಗಾಯನ ವಿಜಯ ಪ್ರಕಾಶ್, ಮೇಘನಾ ಹಳಿಯಾಳ,
ಕೋರಿಯೋಗ್ರಾಫ ರಘು ಆರ್. ಜೆ, ಸಂಗೀತ ಸಂತೋಷ ಅಗಸ್ತ್ಯ, ಸಾಹಸ ಮಾರುತಿ ಮಾಗಡಿ, ರಾಕೆಟ್ ವಿಕ್ರಂ, ಗೀತೆರಚನೆ ಆನಂದ ಕಮಸಾಗರ, ಸ್ಟಿಲ್ ನಾಗಭೂಷಣ, ಪಿಆರ್‌ಓ ಸುಧೀಂದ್ರ ವೆಂಕಟೇಶ್ , ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಮಹೇಶ್ವರಪ್ಪ ಚಕ್ರಸಾಲಿ, ಕಥೆ, ನಿರ್ದೇಶನ ಶಂಕರ.ಜಿ. ಅವರದಿದೆ. ನಿರ್ಮಾಪಕರು ಡಾ.ಮಹಾಂತೇಶ್ ಎಚ್. ಆಗಿದ್ದಾರೆ.