ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಬಿರುಸಾಗಿ ಬೀಸಿದ ಬಿರುಗಾಳಿಗೆ ಸುಮಾರು 500-600 ವರ್ಷದ ಅರಳಿಮರದ ಕೊಂಬೆ ಅಂಗಡಿ ಬಳಿ ಕುಳಿತಿದ್ದ ವ್ಯಕ್ತಿ ಮೇಲೆ ಬಿದ್ದಿದ್ದು ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸುವಾಗ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಮೇಡಿಹಳ್ಳಿ ನಿವಾಸಿ ವೆಂಕಟರಮಣಪ್ಪ (56)ಮೃತ ದುರ್ದೈವಿ. ಅರಳಿಮರದ ಕೆಳಗೆ ಪೆಟ್ಟಿಅಂಗಡಿ ಇಡಲಾಗಿದೆ.
ಎಂದಿನಂತೆ ಅಂಗಡಿ ಬಳಿ ಬಂದು ವೆಂಕಟರಮಣಪ್ಪ ಕುಳಿತಿಕೊಳ್ಳುತ್ತಿದ್ದ. ದುರದೃಷ್ಟ ಎನ್ನುವಂತೆ ಇಂದು ಬೀಸಿದ ಬಿರುಗಾಳಿಗೆ ಒಣಗಿದ್ದ ಅರಳಿಮರದಕೊಂಬೆ ವ್ಯಕ್ತಿ ಮೇಲೆ ಬಿದ್ದಿದೆ. ಪೆಟ್ಟಿ ಅಂಗಡಿ ಒಳಗೆ ವ್ಯಾಪಾರ ಮಾಡುತ್ತಿದ್ದ ಮಹಿಳೆಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಗ್ರಾಮದಲ್ಲಿರುವ ಒಣಗಿರುವ ಮರಗಳನ್ನು ತೆರವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಟನಕುಂಟೆ ಗ್ರಾಮ ಪಂಚಾಯಿತಿಗೆ ತಿಳಿಸಿಲಾಗಿತ್ತು. ಆದರೆ ನಮ್ಮ ಮನವಿಗೆ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದೆ ಈ ಸಾವಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಸಂಬಂದ ಪಟ್ಟ ಅಧಿಕಾರಿಗಳ ಮೇಲೆ ಆರೋಪಿಸಿದ್ದಾರೆ.