ಚಂದ್ರವಳ್ಳಿ ನ್ಯೂಸ್, ಹೊಸದುರ್ಗ;
ಇಲ್ಲಿನ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಮಾಸ್ಟರ್ ಮೈಂಡ್ ಸ್ಕಾಲರ್ ಶಿಪ್ ಪರೀಕ್ಷೆಗೆ ಈ ಬಾರಿ ಅಭೂತಪೂರ್ವ ಯಶಸ್ಸು ಕಂಡು ಬಂದಿದ್ದು. ಸಾವಿರಕ್ಕೂ ಅಧಿಕ ಮಕ್ಕಳು ಹೊಸದುರ್ಗದ ಎಸ್. ನಿಜಲಿಂಗಪ್ಪ ಸಂಸ್ಥೆಗೆ ಆಗಮಿಸಿ ಪರೀಕ್ಷೆಯನ್ನು ಬರೆದರು.
ಕನಸಿನ ಬಾಗಿಲನ್ನು ತೆರೆಯೋಣ ಬನ್ನಿ ಎಂಬ ಶಿರ್ಷೀಕೆ ಅಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಸಿಗೆ ನಿರೇರೆಯುವ ಮೂಲಕ ಅಧ್ಯಕ್ಷತೆ ವಹಿಸಿದ್ದ ಶ್ರೀ. ಶಿವಲಿಂಗಪ್ಪನವರು ಉದ್ಘಾಟಿಸಿದರು. ಸಂಸ್ಥೆಯ ಧರ್ಮದರ್ಶಿಗಳಾದ ವಿಜಯಾ ಶಿವಲಿಂಗಪ್ಪ, ಜಯಾನಂದ ಸರ್ ಸಾಥ್ ನೀಡಿದರು.
ಈ ವೇಳೆ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ಗ್ರಾಮೀಣ ಭಾಗದ ಮಕ್ಕಳ ಓದಿಗೆ ಸಂಸ್ಥೆ ಎಂತಹದ್ದೆ ಸಹಾಯ ಮಾಡಲು ಸಿದ್ದ ಎಂದರು.
ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಂ.ಬಿ. ತಿಪ್ಪೇಸ್ವಾಮಿ ಮಾತನಾಡಿ, ವಿ.ಎಲ್ ಸ್ಪರ್ಧಾ ಅಕಾಡೆಮಿಯ ಸಾಧನೆಗಳನ್ನು ಹೊಗಳಿದರು.
ಈ ಸಂದರ್ಭದಲ್ಲಿ ವಿ.ಎಲ್ ಸ್ಪರ್ಧಾ ಅಕಾಡೆಮಿಯ ಸಂಯೋಜಕ ಡಾ. ಉಮರ ಫಾರೂಕ್ ಮೀರಾನಾಯಕ, ಕಾಲೇಜಿನ ವಿರೇಶ್ ಕುಮಾರ, ಪಿ.ಯು ಪ್ರಾಂಶುಪಾಲ ಸಂತೋಷಕುಮಾರ, ಎಂ.ಪಿ ಪ್ರಕಾಶ, ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ, ಕೆ.ಜಿ. ವಿಭಾಗದ ಅಶ್ವಿನಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಂಜಯ ನಾಡಗೌಡರ ಸ್ವಾಗತಿಸಿದರು. ಸೌಭಾಗ್ಯ, ತಿಪ್ಪೇಸ್ವಾಮಿ ನಿರೂಪಿಸಿದರು. ಕೃತಿಕಾ ವಂದಿಸಿದರು.