ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸರ್ಕಾರ ತಂದಿರುವ ಕಾನೂನು “ಹಲ್ಲಿಲ್ಲದ ಹಾವಿ”ನಂತೆ ಆಗಿದೆ ಎಂಬುದಕ್ಕೆ ಈ ಅಮಾನವೀಯ ಘಟನೆಯೇ ನಿದರ್ಶನ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ, ಬಡ ರೈತನ ಮನೆ ಜಪ್ತಿ ಮಾಡಿ, ಆ ಕುಟುಂಬವನ್ನು ಬೀದಿಗೆ ತಳ್ಳಿರುವ ಘಟನೆ ಖಂಡನೀಯ.
ರಾಜ್ಯದಲ್ಲಿ ರೈತರು, ಬಡವರ ರಕ್ತ ಹೀರುವ ಮೈಕ್ರೋ ಫೈನಾನ್ಸ್ ಕಿರುಕುಳವನ್ನು ತಡೆಯಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

