ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಹು ಸರ್ಕಾರಿ ಕಚೇರಿಗಳ ವಂಚಿತ ದೊಡ್ಡಬಳ್ಳಾಪುರಕ್ಕೆ ಈಗ ಮತ್ತೊಂದು ಶಾಕ್ ನೀಡುತ್ತಿರುವ ಪೊಲೀಸ್ ಇಲಾಖೆ ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರಗೊಳಿಸುವ ಕ್ರಮದ ಬಗ್ಗೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ಘಟಕದ ಸದಸ್ಯರುಗಳು ಠಾಣೆ ಸ್ಥಳಾಂತರಗೊಳಿಸದಿರಲು ಕೋರಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ನಿರ್ದೆಶಕರಾದ ಆರ್ ಸತೀಶ್,ಬಿ.ರಮೇಶ್ ತಾಲ್ಲೂಕು ಅದ್ಯಕ್ಷ ಡಿ.ಚಂದ್ರಶೇಖರ್ ಉಪ್ಪಾರ್,ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ (ನೆಲ್ಲುಗುದಿಗೆ)ಉಮೇಶ್ ,ಮುನಿಯಪ್ಪ ಶಿವರಾಜ್ ಶಿವರಾಜ್ ನೇಸರ ಮುಂತಾದವರು ಇದ್ದರು.