ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗಕ್ಕೆ ವಸತಿ ಸಚಿವ ಜಮಿರ್ ಅಹ್ಮದ್ ಖಾನ್ ಅವರು ಶುಕ್ರವಾರ ಆಗಮಿಸಿದ ಸಂದರ್ಭದಲ್ಲಿ ಮುಂದಿನ ಡಿಸಿಎಂ ಜಮೀರ್ ಅಹ್ಮದ್ ಖಾನ್ ಎಂಬ ಬಿತ್ತಿ ಪತ್ರ ಹಿಡಿದು ಘೋಷಣೆ ಕೂಗಲಾಯಿತು.
ಜಮೀರ್ ಅಹ್ಮದ್ ಖಾನ್ ಮುಂದಿನ ಡಿಸಿಎಂ ಎಂದು ಅಭಿಮಾನಿಗಳು ಘೋಷಣೆ ಕೂಗಿ ಸಚಿವ ಜಮೀರ್ ಅವರನ್ನು ಸಂತೋಷ ಪಡಿಸಿದ ಪ್ರಸಂಗ ನಡೆಯಿತು. ಜಮೀರ್ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಜಮೀರ್ ಸ್ವಾಗತಿಸುವ ವೇಳೆ ಜಮೀರ್ ಮುಂದಿನ ಡಿಸಿಎಂ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಈ ಖುಷಿಯಲ್ಲಿ ಅಭಿಮಾನಿಯೊಬ್ಬರಿಗೆ ಮುತ್ತುಕೊಟ್ಟು ಅಭಿಮಾನಿಗಳನ್ನು ಸಂತೋಷ ಪಡಿಸಿದ್ದಾರೆ.

