ಚುನಾವಣಾ ಆಯೋಗಕ್ಕೆ ಕುತ್ತು ತಂದ ಮೋದಿ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದಲ್ಲಿ ಇನ್ಮುಂದೆ ನಡೆಯುವ ಯಾವುದೇ ಚುನಾವಣೆಗಳೂ ಪಾರದರ್ಶಕವಾಗಿರುವುದಿಲ್ಲ! ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ. ಕೇಂದ್ರದನರೇಂದ್ರ ಮೋದಿ ಸರ್ಕಾರ ಚುನಾವಣಾ ಆಯೋಗದ ಕತ್ತು ಹಿಸುಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಮೇಲೆ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಿಟ್ ಅರ್ಜಿಯೊಂದಕ್ಕೆ ಹರಿಯಾಣ ಹೈಕೋರ್ಟ್ ಹರ್ಯಾಣ ಚುನಾವಣೆಯ ಎಲ್ಲಾ ದಾಖಲೆಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಚುನಾವಣಾ ನಿಯಮಗಳನ್ನೇ ಬದಲಾಯಿಸಿದೆ ಸರ್ವಾಧಿಕಾರಿ ಕೇಂದ್ರದ ಸರ್ಕಾರ! ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.

1961ರ ನೀತಿ ಸಂಹಿತೆಯ 93(2)(a) ಪ್ರಕಾರ, ಮೊದಲು ಎಲ್ಲಾ ಚುನಾವಣಾ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಾಗಿತ್ತು. ಈಗಿನ ತಿದ್ದುಪಡಿಯಂತೆ ಚುನಾವಣಾ ದಾಖಲೆಗಳನ್ನು ಸಾರ್ವಜನಿಕರು ಪರಿಶೀಲಿಸದಂತೆ ನಿರ್ಬಂಧಿಸಲಾಗಿದೆ ಎಂದು ಕಾಂಗ್ರೆಸ್ ದೂರಿದೆ.

ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ ಅಡ್ವಾನಿಯಿಂದ, ಉದ್ಯಮಿ ಎಲಾನ್ ಮಸ್ಕ್ ವರೆಗೆ ಎಲ್ಲಾರೂ ಅನುಮಾನ ವ್ಯಕ್ತಪಡಿಸಿರುವ ಇವಿಎಂವಿಶ್ವಾಸಾರ್ಹತೆಗೆ ಇಂಬು ನೀಡುವಂತಿದೆ ಕೇಂದ್ರ ಸರ್ಕಾರದ ಈ ಅನುಮಾನಾಸ್ಪದ ನಡೆ. ಮೋದಿ ಸರ್ಕಾರದ ಇವಿಎಂ ದುರ್ಬಳಕೆ, ಚುನಾವಣಾ ಅಕ್ರಮಗಳಿಗೆ ಇದಕ್ಕಿಂತಾ ಸಾಕ್ಷಿ ಬೇಕೆ? ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.

 

- Advertisement -  - Advertisement - 
Share This Article
error: Content is protected !!
";