ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಕ್ಷಣಾ ಕ್ಷೇತ್ರವನ್ನು ಬಲಪಡಿಸುತ್ತಿದೆ ಮೋದಿ ಸರ್ಕಾರ ! ಸ್ವದೇಶಿ ತಂತ್ರಜ್ಷಾನದೊಂದಿಗೆ ದೇಶೀಯವಾಗಿ ತಯಾರಾದ ಎಕೆ-203 ಪ್ರತಿ ನಿಮಿಷಕ್ಕೆ 700 ಸುತ್ತು ಗುಂಡು ಹಾರಿಸಬಲ್ಲ ತಾಕತ್ತು ಹೊಂದಿದ್ದು, 800 ಮೀಟರ್ ರೇಂಜ್ ಸಾಮರ್ಥ್ಯ ಹೊಂದಿದೆ ಎಂದು ಬಿಜೆಪಿ ತಿಳಿಸಿದೆ.
ಶೇ. 50 ರಷ್ಟು ಸ್ವದೇಶಿ ನಿರ್ಮಿತವಾದ ಸುಮಾರು 7000 ಎಕೆ-203 ರೈಫಲ್‌ಗಳು ಕೆಲವು ವಾರಗಳಲ್ಲಿ ಸೇನೆಗೆ ಪೂರೈಕೆಯಾಗಲಿದ್ದು, ಈ ವರ್ಷದ ಅಂತ್ಯಕ್ಕೆ ರೈಫಲ್‌ಗಳು ಶೇ. 100ರಷ್ಟು ಸ್ವದೇಶಿ ನಿರ್ಮಿತವಾಗಲಿವೆ. ಒಂದು ವರ್ಷದಲ್ಲಿ 1.5 ಲಕ್ಷ ರೈಫಲ್ ತಯಾರಿಯೊಂದಿಗೆ 2030 ರೊಳಗೆ 6 ಲಕ್ಷ ರೈಫಲ್‌ಗಳ ಪೂರೈಕೆ ಪೂರ್ಣಗೊಳ್ಳಲಿದೆ.
ಸ್ವದೇಶಿ ನಿರ್ಮಿತ ರೈಫಲ್‌ಗಳ ಉತ್ಪಾದನೆಯು ಮೇಕ್ ಇನ್ ಇಂಡಿಯಾ ಕ್ರಾಂತಿಗೆ ಹಿಡಿದ ಕೈಗನ್ನಡಿಯಾಗಿದ್ದು, ಭಾರತವನ್ನು ಆತ್ಮನಿರ್ಭರವಾಗಿಸುವ ಮೋದಿ ಸರ್ಕಾರದ ಉಪಕ್ರಮವು ಫಲ ನೀಡುತ್ತಿದೆ ಎಂದು ಬಿಜೆಪಿ ಹೇಳಿದೆ.