ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅನ್ನದಾನ ಕಾರ್ಯಕ್ಕೆ ಚಾಲನೆ ನೀಡಿದ ಸಂಸದರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೆದೇಹಳ್ಳಿ ರಸ್ತೆಯವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26 ನೇ ವರ್ಷದ  ಅನ್ನದಾನದ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಅವರು ಭಾನುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಸ್ ಆರ್ ಎಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಬಿ.ಎ ಲಿಂಗಾರೆಡ್ಡಿಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜನ್, ವಕೀಲರ ಪಾತ್ಯರಾಜನ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಶರಣ್ ಕುಮಾರ್, ಬಿಜೆಪಿ ಮಾಜಿ ಅಧ್ಯಕ್ಷ ಮುರಳಿ, ಹೊಸದುರ್ಗ ಅಯ್ಯಪ್ಪ ಸ್ವಾಮಿ ಗುರುಗಳಾದ ಸೈಯದ್, ಮಾತಾ ಇಂಡಸ್ಟ್ರೀಸ್ ಮಾಲೀಕ ಮಹಾಂತೇಶ್, ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ ಮುಖ್ಯಸ್ಥ ಅರುಣ್ ಕುಮಾರ್, ಕಾರ್ಯದರ್ಶಿ ಎಂ ಪಿ ವೆಂಕಟೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನ್, ದೇವಸ್ಥಾನದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. 

- Advertisement - 

ಇದೇ ಸಂದರ್ಭದಲ್ಲಿ ಗಣ ಹೋಮ, ನವ ಗ್ರಹ ಹೋಮ, ರುದ್ರ ಹೋಮ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಪ್ರತಿ ವರ್ಷದಂತೆ ಮಾಲೆ ಧರಿಸಿದ ಅಯ್ಯಪ್ಪ ಸ್ವಾಮಿಗಳಿಗೆ ಇಂದಿನಿಂದ ದಿನಾಂಕ-
13 -1- 2026 ವರೆಗೆ  60 ದಿನಗಳ ಕಾಲ ಪ್ರತಿನಿತ್ಯ ಅನ್ನದಾನ  ಕಾರ್ಯಕ್ರಮ ನೆರವೇರಿಸಲಾಗುವುದು.

16-12-2025 ರಿಂದ 21-12-2025  ರವರೆಗೆ 26ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ. 20-12- 2025 ಶನಿವಾರ ಸಂಜೆ 7ಗಂಟೆಗೆ ಅಯ್ಯಪ್ಪ ಸ್ವಾಮಿ ಪಡಿಪೂಜೆ ಕಾರ್ಯಕ್ರಮ, 28- 12- 2025 ಭಾನುವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಅನ್ನದಾನ ಕಾರ್ಯಕ್ರಮ, 13-01-2026 ಮಂಗಳವಾರ ಸಂಜೆ 6 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ 14 -1-2026 ಬುಧವಾರ ಸಂಜೆ 6 ಗಂಟೆಗೆ ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ಇರುತ್ತದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ. 

- Advertisement - 

 

 

Share This Article
error: Content is protected !!
";