ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಸುಳ್ಳು ಹೇಳಿ ಡ್ರಾಮಾ ಮಾಡಿದ್ದ ಕೊಲೆಗಾರ ಪತಿ ಅರೆಸ್ಟ್

News Desk

ಬೆಂಗಳೂರು: ಪತ್ನಿ ಮೇಲಿನ ಅನುಮಾನಕ್ಕೆ ಆಕೆಯನ್ನು ಬರ್ಬರವಾಗಿ ಹತ್ಯೆಗೈದು ನಟಕವಾಡಿದ್ದ ಪತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಮೆಹಬೂಬ್ ಪಷಾ (50) ಬಂಧಿತ ಆರೋಪಿ. ಪತ್ನಿ ಮುಮ್ತಾಜ್ ಳನ್ನು ಹತ್ಯೆಗೈದು ಬಳಿಕ ಮೆಹಬೂಬ್ ಪಾಷಾ ಆ.25ರಂದು ಬಾಗಲೂರು ಠಾಣೆಗೆ ಬಂದು ತನ್ನ ಪತ್ನಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ.

ತಾನು ಕಾರ್ಯಕ್ರಮದ ನಿಮಿತ್ತ ಹೊರ ಹೋಗಿದ್ದೆ. ಸಂಜೆ ಕರೆ ಮಾಡಿದಾಗ ಪತ್ನಿ ಫೋನ್ ರಿಸೀವ್ ಮಡಿರಲಿಲ್ಲ. ಬೆಳಿಗ್ಗೆ ಬಂದು ನೋಡಿದರೆ ತೋಟದ ಬಳಿ ಹೆನವಾಗಿ ಬಿದ್ದಿದ್ದಳು. ಯಾರೋ ಪತ್ನಿಯನ್ನು ಕೊಲೆಗೈದು ಹೋಗಿದ್ದಾರೆ ಎಂದು ಕಣ್ಣೀರಿಟ್ಟಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೆಹಬೂಬ ಪಾಷಾನನ್ನೇ ವಿಚಾರಣೆ ನಡೆಸಿದ್ದರು. ಈ ವೇಳೆ ತಾನೇ ಪತ್ನಿಯನ್ನು ಕೊಲೆಗೈದಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹಣ್ಣು ಕೀಳಲೆಂದು ಪತ್ನಿಯನ್ನು ತೋಟಕ್ಕೆ ಕರೆದೊಯ್ದು ಬಳಿಕ ಅನಗತ್ಯವಾಗಿ ಜಗಳ ತೆಗೆದು ಕಬ್ಬಿಣದ ಆಯುಧದಿಂದ ಆಕೆಯ ತಲೆಗೆ ಹೊಡೆದು ಕೊಂದಿದ್ದ. ಬಳಿಕ ಶವವನ್ನು ತೋಟದಲ್ಲೇ ಬಿಟ್ಟು ರಾತ್ರಿ ಮನೆಗೆ ಹೋಗದೆ ಬೇರೆಡೆ ತೆರಳಿದ್ದ. ಬೆಳಿಗ್ಗೆ ಬಂದು ಕಥೆಕಟ್ಟಿ ನಾಟಕವಾಡಿದ್ದ.

Share This Article
error: Content is protected !!
";