ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಶ್ರೀ ಮ್ಯೂಸಿಕ್ ಅಕಾಡೆಮಿ ಸಂಸ್ಥೆಯು ಈ ಬಾರಿ ಮಲೆನಾಡ ಹೆಮ್ಮೆಯ ರಾಷ್ಟ್ರಕವಿ ಕು.ವೆಂ.ಪು ಅವರ ಆಯ್ದ ಗೀತೆಗಳ ವಿಶೇಷ ‘ಸಮ್ಮಿಲನ – 2025′ –ರಸ ಋಷಿ ಕುವೆಂಪು ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸ ಋಷಿ ಕುವೆಂಪು ಅವರ ಗೀತೆಗಳನ್ನು ಒಂದು ತಿಂಗಳಿನಿಂದ ಕಲಿತು ಅಭ್ಯಾಸ ಮಾಡಿ ಅಂದು ಪೂರ್ಣ ದಿನ ಕವಿಗಳ ಅನೇಕ ಗೀತೆಗಳನ್ನ ಅತ್ಯಂತ ಸುಮಧುರವಾಗಿ ಗಾನ ಗೀತ ಹಾಡಿ ನಮನ ಸಲ್ಲಿಸಲಿದರು.
ಕನ್ನಡ ನೆಲದ ಹೆಮ್ಮೆಯ ಲೇಖಕ, ಚಿಂತಕ ಡಾ.ಜಿ.ಬಿ.ಹರೀಶ, ಕುವೆಂಪು ಅವರ ಸಾಹಿತ್ಯದ ವೈಶಿಶ್ಟ್ಯತೆಯ ಕುರಿತು ಮಾತನಾಡಿದರು. ನಾಡಿನ ಇತಿಹಾಸಕಾರ್ತಿ, ಸಂಶೋಧಕಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ವಸುಂಧರಾ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಇವರನ್ನು ಸಂಸ್ಥೆ ವತಿಯಿಂದ ಸಮ್ಮಾನಿಸಲಾಯಿತು.
ಬನಶಂಕರಿಯ ‘ದಿ ಫೈನರ್ ಸೈಡ್‘ ಸಭಾಂಗಣದಲ್ಲಿ, ಇತ್ತೀಚಿಗೆ ಈ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನ ಶ್ರೀ ಮ್ಯೂಸಿಕ್ ಅಕಾಡೆಮಿ ಆಯೋಜಿಸಿತ್ತು.
ಶ್ರೀ ಮ್ಯೂಸಿಕ್ ಸಂಸ್ಥೆಯ ವಿದ್ವಾನ್ ಸದಾಶಿವ್ ಭಟ್ ಮತ್ತು ಸಿಂಚನಾ ಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಸಾವಿರಾರು ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು.