ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇವಲ 342 ಕೋಟಿ ರೂಪಾಯಿ ಅನುದಾನ ಕೊಡಲು ಸಾಧ್ಯವಾಗದೆ ಈಗಾಗಲೇ ರಾಜ್ಯದ 9 ವಿಶ್ವವಿದ್ಯಾಲಯಗಳಿಗೆ ಶಾಶ್ವತವಾಗಿ ಬೀಗ ಜಡಿಯಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈಗ ರಾಜ್ಯದ ಹಳೆಯ ಮತ್ತು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಮೈಸೂರು ವಿವಿ, ಧಾರವಾಡದ ಕರ್ನಾಟಕ ವಿವಿಗಳಲ್ಲಿ ನಿವೃತ್ತರಿಗೆ ಪಿಂಚಣಿ ಕೊಡಲೂ ಸಾಧ್ಯವಾಗದ ಪರಿಸ್ಥಿತಿ ತಂದಿಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ರಾಜ್ಯದ ಪ್ರತಿಷ್ಠಿತ ಹಳೆಯ ವಿಶ್ವವಿದ್ಯಾಲಗಳೇ ಈ ರೀತಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೆ ಇನ್ನು ಬೇರೆ ವಿವಿಗಳ ಕಥೆಯೇನು? ಸರ್ಕಾರಿ ಪದವಿ ಕಾಲೇಜುಗಳು, ಪಾಲಿಟೆಕ್ನಿಕ್ ಗಳ ಪರಿಸ್ಥಿತಿ ಏನು?
ನಿವೃತ್ತರ ಪಿಂಚಣಿಗೆ 130 ಕೋಟಿ ರೂಪಾಯಿ ಅನುದಾನ ಕೊಡಲು ನಿಮ್ಮ ಸರ್ಕಾರದಲ್ಲಿ ಹಣವಿಲ್ಲ ಅಂದರೆ ಇನ್ನೇನು ಸರ್ಕಾರ ನಡೆಸುತ್ತೀರಿ? ಒಟ್ಟಿನಲ್ಲಿ ಈ ದರಿದ್ರ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕರ್ನಾಟಕಕ್ಕೆ ಉಳಿಗಾಲವಿಲ್ಲ ಎಂದು ಅಶೋಕ್ ಹರಿಹಾಯ್ದಿದ್ದಾರೆ.

