ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷ ಸೇರಿದಂತೆ ಇಂಡಿ ಮೈತ್ರಿಕೂಟದ ಮೇಲೆ ದೇಶದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಸತತ ಸೋಲು ಎದುರಿಸುತ್ತಿರುವ ಇಂಡಿ ಮೈತ್ರಿಕೂಟ ಹತಾಶೆಯಿಂದ ಇದೇ ಮೊದಲ ಬಾರಿಗೆ ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆಂದು ಬಿಜೆಪಿ ಕಿಡಿ ಕಾರಿದೆ.
ಕಾಂಗ್ರೆಸ್ ಬಹುಕಾಲ ದೇಶದ ಆಡಳಿತದಲ್ಲಿತ್ತು. ಆಗ ವಿಪಕ್ಷದಲ್ಲಿದ್ದ ಯಾವ ಪಕ್ಷಗಳೂ ಉಪರಾಷ್ಟ್ರಪತಿಯ ವಿರುದ್ಧ ಅವಿಶ್ವಾಸ ಮಂಡಿಸಿರಲಿಲ್ಲ. ಆದರೆ ಕೇವಲ 10 ವರ್ಷಗಳಿಂದ ವಿಪಕ್ಷ ಸಾಲಿನಲ್ಲಿ ಕುಳಿತುಕೊಳ್ಳಲೂ ಕಾಂಗ್ರೆಸ್ಸಿನ ಮನಸ್ಸು ಒಪ್ಪುತ್ತಿಲ್ಲ. ಅದಕ್ಕಾಗಿ ಇಂತಹ ನಾಟಕಗಳಮೊರೆ ಹೋಗಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಇವಿಎಂ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದ ಇಂಡಿ ಮೈತ್ರಿಕೂಟದ ಪ್ರಯತ್ನ ಕೈಗೂಡುವಂತೆ ಕಾಣುತ್ತಿಲ್ಲ. ಅದಕ್ಕಾಗಿ ರಾಜ್ಯಸಭೆಯಲ್ಲಿ ಹೊಸ ನಾಟಕ ಆರಂಭಿಸಿದೆ. ವಾಸ್ತವದಲ್ಲಿ ಇಂಡಿ ಮೈತ್ರಿಕೂಟಕ್ಕೆ ರಾಜ್ಯ ಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಉಪರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸುವಷ್ಟು ಸಂಖ್ಯಾಬಲವೇ ಇಲ್ಲ. ಆದರೂ ಜನರ ಗಮನ ಸೆಳೆಯಲು ಸೊರೋಸ್ ಅಣತಿಯಂತೆ ಹೊಸ ಕಸರತ್ತು ನಡೆಸುತ್ತಿದೆ ಎಂದು ಬಿಜೆಪಿ ದೂರಿದೆ.