ರಾಜ್ಯದ ಜನರು ಬಿಜೆಪಿಯ ನೀಚತನವನ್ನು ಎಂದೂ ಒಪ್ಪುವುದಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾವಿನಲ್ಲಿ ರಾಜಕಾರಣ ಮಾಡುವ ಕೀಳು ಸಂಸ್ಕೃತಿಯ ಕರ್ನಾಟಕ ಬಿಜೆಪಿಗೆ
 ಹೆಣದ ಮೇಲಿನ ರಾಜಕಾರಣಕ್ಕೆ ದೊಡ್ಡ ಇತಿಹಾಸವೇ ಇದೆ ಎಂದು ಕಾಂಗ್ರೆಸ್ ಆರೋಪಿಸಿ ಹಲವು ಪಟ್ಟಿಗಳನ್ನು ನೀಡಿದೆ.

ಹೆಣ ಬಿದ್ದಾಕ್ಷಣ ರಣ ಹದ್ದುಗಳಂತೆ ಹಾರಿ ಬರುವ ಬಿಜೆಪಿಗರ ಹೀನ ಚರಿತ್ರೆ ಪದೇ ಪದೇ ಜನರೆದರು ಬಯಲಾದರೂ ಅವರ ಚಾಳಿ ಬದಲಾಗಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.

ಕೊಡಗಿನ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣ ಇದಕ್ಕೆ ಹೊಸ ಸೇರ್ಪಡೆ! ಎಂದು ಕಾಂಗ್ರೆಸ್ ಅಚ್ಚರಿ ವ್ಯಕ್ತಪಡಿಸಿದೆ.

ವಿನಯ್ ಅವರ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಹೇಳದೆ, ಬೇರೆಯವರಿಗೂ ಅದಕ್ಕೆ ಅವಕಾಶ ಮಾಡಿ ಕೊಡದೆ ಪ್ರತಿಭಟನೆಯ ಬೃಹನ್ನಾಟಕ ಸೃಷ್ಟಿಸಿದ ಬಿಜೆಪಿಯ ಹೆಣದ ಮೇಲಿನ ರಾಜಕಾರಣದ ಒಂದಷ್ಟು ಸ್ಯಾಂಪಲ್‌ಗಳು! ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಅಶೋಕ್‌ಪೂಜಾರಿ- ಬಿಜೆಪಿಯ ಕೊಲೆಯಾದವರ ಪಟ್ಟಿಯಲ್ಲಿದ್ದ ಅಶೋಕ್ ಪೂಜಾರಿ ಎಂಬ ವ್ಯಕ್ತಿ ತಾನೇ ಮಾಧ್ಯಮಗಳ ಮುಂದೆ ಬಂದು ನಾನು ಸತ್ತಿಲ್ಲ
, ಬದುಕಿದ್ದೇನೆ ಎಂದು ಹೇಳಬೇಕಾಯಿತು!

ವಾಮನ ಪೂಜಾರಿ – ಮೂಡಬಿದ್ರೆಯ ವಾಮನ ಪೂಜಾರಿಯವರ ಹತ್ಯೆಯಾಗಿರಲಿಲ್ಲ 2015ರ ಅಕ್ಟೋಬರ್ 15 ರಂದು ಅವರು ಮೂಡಬಿದ್ರೆಯ ಬನ್ನಡ್ಕದಲ್ಲಿರುವ ಮನೆಯ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಾರ್ತಿಕ್ ರಾಜ್ – 2016ರ ಅಕ್ಟೋಬರ್ 22ರಂದು ನಡೆದ ಕಾರ್ತಿಕ್ ರಾಜ್ ಕೊಲೆ ದಕ್ಷಿಣ ಕನ್ನಡ ಜಿಲ್ಲೆಯನ್ನೇ ದಂಗುಬಡಿಸಿತ್ತು.

ಈ ಕೊಲೆಯ ಹಿಂದಿರುವ ಅಪರಾಧಿಗಳನ್ನು ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಕಿದ್ದರು. ಆದರೆ, ಈ ಕೊಲೆಯ ರೂವಾರಿ ಕಾರ್ತಿಕ್‌ರಾಜ್‌‌ರ ಸಹೋದರಿಯೇ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಪ್ರವೀಣ್ ಪೂಜಾರಿ – ಗೋ ಸಾಗಾಣಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪದಲ್ಲಿ ಬಿಜೆಪಿಯ ಕೆಂಜೂರು ಘಟಕದ ಮಾಜಿ ಸ್ಥಾನೀಯ ಅಧ್ಯಕ್ಷರಾಗಿದ್ದ ಪ್ರವೀಣ್ ಪೂಜಾರಿ ಆಗಸ್ಟ್ 17, 2016ರಂದು ಉಡುಪಿಯ ಬ್ರಹ್ಮಾವರ ಕೊಕ್ಕರ್ಣೆ ಸಮೀಪದ ಕೆಂಜೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದರು.

ಹರೀಶ್ ಪೂಜಾರಿ – ನವೆಂಬರ್ 12, 2015 ರಂದು ಬಿ.ಸಿ‌ರೋಡ್ ಸಮೀಪದ ಮಣೆಹಳ್ಳಿ ಎಂಬಲ್ಲಿ ಹರೀಶ್ ಪೂಜಾರಿಯವರ ಕೊಲೆಯಾಗಿತ್ತು. ಅವರನ್ನು ಮುಸ್ಲಿಮರೇ ಕೊಲೆ ಮಾಡಿದ್ದಾರೆ ಎಂದು ಸಂಘ ಪರಿವಾರ ಪುಕಾರು ಎಬ್ಬಿಸಿತ್ತು. ಆದರೆ ಸಂಘ ಪರಿವಾರದ ಭುವಿತ್ ಶೆಟ್ಟಿ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಕಾಂಗ್ರೆಸ್ ತಿಳಿಸಿದೆ.

 ಪರೇಶ್ ಮೇಸ್ತಾ‌- 2017 ರಲ್ಲಿ, ಡಿಸೆಂಬರ್ 8 ರಂದು 21 ವರ್ಷದ ಪರೇಶ್ ಮೇಸ್ತಾ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ನಂತರ, ಕರ್ನಾಟಕದ ಉತ್ತರ ಕನ್ನಡದ ಕರಾವಳಿ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಕೋಮು ಕೋಲಾಹಲ‌ಸೃಷ್ಟಿಸಲಾಯಿತು.

ಹಿಂದುತ್ವ ಕಾರ್ಯಕರ್ತರ ಮೇಲಿನ ದಾಳಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ರಂಪಾಟ ಮಾಡಿತ್ತು. ಆದರೆ ಐದು ವರ್ಷಗಳ ನಂತರ ಸಿಬಿಐ ಈ ಪ್ರಕರಣದಲ್ಲಿ ಬಿ-ರಿಪೋರ್ಟ್ ಸಲ್ಲಿಸಿ, ಮೇಸ್ತಾ ಸಾವು ಆಕಸ್ಮಿಕ ಎಂದಿತ್ತು ಎಂದು ಕಾಂಗ್ರೆಸ್ ತಿಳಿಸಿದೆ.

ಸಾವಿನಲ್ಲೂ ದ್ವೇಷ ರಾಜಕಾರಣ ಮಾಡುವ ಬಿಜೆಪಿಯ ನೀಚತನವನ್ನು ರಾಜ್ಯದ ಜನ ಎಂದೂ ಒಪ್ಪುವುದಿಲ್ಲ. ಸುಳ್ಳಿನ ಆಯಸ್ಸು ಅಲ್ಪ, ಸತ್ಯ ಶಾಶ್ವತ! ಎಂದು ಕಾಂಗ್ರೆಸ್ ತಿಳಿಸಿದೆ.

Share This Article
error: Content is protected !!
";