ಫೆ.24ರಂದು ವಿದ್ಯುತ್ ವ್ಯತ್ಯಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಚಿತ್ರದುರ್ಗ ನಗರ ಉಪ ವಿಭಾಗ ಘಟಕ-1 ರ ವ್ಯಾಪ್ತಿಯಲ್ಲಿ ಬರುವ ಕೆಳಗೋಟಿ ಮಾರ್ಗದ ನಗರಸಭೆ ವ್ಯಾಪ್ತಿಗೆ ಬರುವ ರಸ್ತೆಯ ಬದಿಯ ಬೃಹದಾಕಾರದ ಮರ ತೆರವು ಮಾಡಲು ಕಾಮಗಾರಿಗೆ ಅಡ್ಡಲಾಗಿರುವ 11ಕೆವಿ ಮಾರ್ಗಗಳನ್ನು ಬಿಚ್ಚಿ ಪುನಃ ಅಳವಡಿಸಲು ಈ  ಕಾಮಗಾರಿಯನ್ನು ನಗರಸಭೆಯವರು  ನಿರ್ವಹಿಸುತ್ತಿದ್ದು, ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಇದೇ ಫೆ.24 ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು: ಚಿತ್ರದುರ್ಗ ನಗರದ ಮುನ್ಸಿಪಲ್ ಕಾಲೋನಿ, ಭುವನೇಶ್ವರಿ ಸರ್ಕಲ್, ಕೆಳಗೋಟೆ, ಭೀಮಪ್ಪ ನಾಯಕರ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ‌ಚಿತ್ರದುರ್ಗ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

 

Share This Article
error: Content is protected !!
";