ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಉಪವಿಭಾಗದ ವ್ಯಾಪ್ತಿಯ ಜವಗೊಂಡನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ ಜೂನ್ 24ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಿರಿಯೂರು ಮತ್ತು ಜವಗೊಂಡನಹಳ್ಳಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಜೆ.ಜಿ.ಹಳ್ಳಿ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ಹಾಗೂ ಹಿರಿಯೂರು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಎಲ್ಲಾ 11 ಕೆ.ವಿ ಮಾರ್ಗಗಳಿಗೆ ಜೂನ್ 24ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಹಿರಿಯೂರು ಪಟ್ಟಣ, ಮೇಟಿಕುರ್ಕೆ, ಲಕ್ಕವ್ವನಹಳ್ಳಿ ದೊಡ್ಡಘಟ್ಟ ಸೀಗೆಹಟ್ಟಿ, ಜವಗೊಂಡನಹಳ್ಳಿ, ಅನೆಸಿದ್ರಿ, ಕಾಟನಾಯಕನಹಳ್ಳಿ ಮತ್ತು ಕಾಟನಾಯಕನಹಳ್ಳಿ ತಾಂಡ, ಓಬಳಪುರ, ಓಬಳಾಪುರ ತಾಂಡ, ಕಿಲಾರದಹಳ್ಳಿ, ಮಾವಿನಮಡು, ಲಕ್ಕೇನಹಳ್ಳಿ, ಪಿಲಾಲಿ, ಸೂರಪ್ಪನಹಟ್ಟಿ, ಬಗ್ಗನಾಡು, ವಡ್ಡನಹಳ್ಳಿ, ಕರಿಯಾಲ, ಗಾಯಿತ್ರಿಪುರ, ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್. ಪೀರ್ ಸಾಬ್ ತಿಳಿಸಿದ್ದಾರೆ.