ಮುಂಗಾರು ಮಳೆ.. ಕುಸಿದ ಹೂವಿನ ಬೆಲೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮುಂಗಾರು ಆರಂಭವಾಗುತ್ತಿದ್ದಂತೆಯೆ ಹಿಂದೂಗಳ ಹಾಗು ಜೊತೆಯಲ್ಲಿ ಮುಸ್ಲಿಂರ ಹಬ್ಬಗಳು ಪ್ರಾರಂಭವಾಗಿ ರೈತರು
  ಬೆಳೆದ ಬೆಳೆ ಉತ್ತಮವಾದ ಲಾಭ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತ ಎಲ್ಲಾ ಬೆಳೆಗಳ ಬೆಲೆ ಕುಸಿದಿದ್ದು ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವರಮಹಾಲಕ್ಷ್ಮಿ, ಗೌರಿ ಗಣೇಶ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಬಲು ದುಬಾರಿ ಯಾಗಿದ್ದ ಹೂವಿನ ಬೆಲೆ ಪಿತೃಪಕ್ಷ ಆರಂಭದ ಬಳಿಕ ಹೂವು ಬಾರಿ  ಕುಸಿತ ಕಂಡು  ಹೂ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. 

- Advertisement - 

ಸೆ.7ರಿಂದ ಪಿತೃ ಪಕ್ಷ ಆರಂಭಗೊಂಡಿದೆ. ಈ ಸಮಯದಲ್ಲಿ ಮದುವೆ, ನಾಮ ಕಾರಣ, ಗೃಹಪ್ರವೇಶ ಇತರೆ ಶುಭ ಕಾರ್ಯಗಳು ಹೆಚ್ಚು ನಡೆಯುವುದಿಲ್ಲ. ಹೀಗಾಗಿ ಸ್ಥಳೀಯವಾಗಿ ಬೆಳೆದ ಹೂವಿಗೆ ಬೇಡಿಕೆ ಕಡಿಮೆ ಆಗಿರುವುದರಿಂದ ಕುಸಿದಿದೆ.

ನೆರೆಯ ರಾಜ್ಯ, ಜಿಲ್ಲೆಗಳಲ್ಲಿ-ಯೂ ಹೂವಿಗೆ ಸೂಕ್ತ ಬೇಡಿಕೆಯೂ ಸಹ ಇಲ್ಲದಿರುವುದರಿಂದ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಹೂವು ರಫ್ತು ಆಗುತ್ತಿಲ್ಲ. ಇದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

- Advertisement - 

ಕಳೆದ ವಾರದ ಹಿಂದೆಯಷ್ಟೇ ಗಗನ ಕುಸುಮವಾಗಿದ್ದ ಹೂವಿನ ಬೆಲೆ ಈಗ ಪಾತಾಳ ಸೇರಿದೆ. ಸದ್ಯ ಮಾರುಕಟ್ಟೆಯಲ್ಲಿ ಹೂವಿನ ದರವು ಗಣನೀಯ ಕುಸಿತ ಆಗಿರುವುದು ದೇವರ ಮುಡಿಗೆ ಸೇರಬೇಕಾದ ಹೂ ತಿಪ್ಪೆಯ ಪಾಲಾಗುತ್ತಿದೆ. ತೋಟದಲ್ಲಿ ಹೂ ಕಿತ್ತ ಕೂಲಿ ಹಣವು ಕೈಗೆ ಸಿಗದೆ ರೈತರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ.

ರೈತ ಬೆಳೆ ಬೆಳೆಯುವು ಒಂದು ಕಡೆಯಾದರೆ ಹೂವು ತುಂಬುವ ಬ್ಯಾಗುಗಳಿಗೆ ಹಣ ಹಾಕದ ಸ್ಥಿತಿಗೆ ಬಂದಿದ್ದಾನೆ. ವರಮಹಾಲಕ್ಷ್ಮೀ  ಹಾಗು ಗೌರಿ ಗಣೇಶ ಹಬ್ಬ ಸಂದರ್ಭಕ್ಕೆ  ಹೂವಿನ ಬೆಲೆ ಹೊಲಿಕೆ ಮಾಡುವುದಾದರೆ. 

             ಹಿಂದಿನ ದರ        ಈಗಿನ ದರ
ಚೆಂಡು    50-70              10-15
ಸೇವಂತಿ  250-300           20-30
ಗುಲಾಬಿ  250-350.            20 -30
ಕನಾಕಂಬರ 1200-1400.   250 -400

ಮಲ್ಲಿಗೆ      1200-1500.    300 – 450
ಕಾಕಡ           1500.            300
ಗುಲಾಬಿ ಹಾರ 400.        200
ಸೇವಂತಿ ಹಾರ 250.           50
ಬಟನ್ಸ್      100.          15  30

 ಕೂಲಿಗೆ ರೈತ ಹೂ ಕೀಳಲು ಹಿಂಜರಿಕೆ-
ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿತ ಕಂಡಿರುವುದರಿಂದ ರೈತರು ತೋಟಗಳಲ್ಲಿ ಹೂ ಬಿಡಿಸಲು ಮುಂದಾಗುತ್ತಿಲ್ಲ. ಹೂ ಬಿಡಿಸಿದ ಕೂಲಿ, ಸಾಗಾಟದ ಖರ್ಚು, ಔಷಧ, ರಸಗೊಬ್ಬರಕ್ಕೂ ಹಣ ಬಾರದೇ ಇರುವುದರಿಂದ ರೈತರು ತೋಟದಲ್ಲಿನ ಹೂವು ಕೀಳಲು ಹಿಂದೇಟು ಹಾಕುತ್ತಿದ್ದಾರೆ. 

ವರ್ಷದಲ್ಲಿ ಗೌರಿ ಗಣೇಶ ವರಮಹಾಲಕ್ಷ್ಮೀ ಹೀಗೆ ಮುಂದುವರೆದಂತೆ ಮುಂದಿನ ಹಬ್ಬಗಳಿಗೆ ಹೂವಿನ ಬೆಳೆ ಯಿಂದ ಉತ್ತಮ ಬೆಲೆ ಸಿಗಬಹುದು ಎಂದು ಕಷ್ಠಪಟ್ಟು  ಕೂಲಿ ಕಾರ್ಮಿಕರು ಸಿಗದ ಸಂದರ್ಭದಲ್ಲಿ ಹೂವಿನ ಬೆಳೆಯಿಂದ ಉತ್ತಮ ಆದಾಯದ ನೀರೀಕ್ಷೆ ಇತ್ತು  ಮಹಾಲಕ್ಷ್ಮಿ ಹಾಗು ಗೌರಿ ಗಣೇಶ ಹಬ್ಬದಂದು  ಹೂವಿನ ಬೆಳೆಗೆ ಉತ್ತಮ ಬೆಲೆ ಸಿಕ್ಕಿತ್ತು ಅದರೆ ನಂತರ ದಿನದಲ್ಲಿ ಬೆಲೆ ಕುಸಿತದಿಂದ ಹೂವು ಬಿಡಿಸುವುದು ಬೇಡ ಎಂಬ ಸ್ಥಿತಿಗೆ ಬಂದಿದೆವೆ”.
ವಾಸುದೇವ, ಹೂ ಬೆಳೆಗಾರ. 

ರೈತರು ಬೆಳೆದು ತಂದ ಹೂವು ಮಾರಾಟವಾಗಿದೆ ಮಾರುಕಟ್ಟೆಯಲ್ಲಿ ಒಣಗಿ ನಷ್ಟವಾಗುತ್ತಿದೆ ವರಮಹಾಲಕ್ಷ್ಮೀ ಹಾಗೂ ಗೌರಿ ಗಣೇಶ ದಿನಗಳಲ್ಲಿ ಒಂದು ವಾರ ಗ್ರಾಹಕರಿಂದ ಉತ್ತಮ ಸ್ವಂದನೆ ಇತ್ತು  ಪಿತೃಪಕ್ಷ ಆರಂಭದಿಂದ ವ್ಯಾಪರದಲ್ಲಿ ಬಾರಿ ಕುಸಿತ ಕಂಡು ಹೆಚ್ಚು ಹೂವು ತೆಗೆದು ಕೊಂಡು ವ್ಯಾಪಾರ ಮಾಡೂಣ ಎಂದರೆ ಗ್ರಾಹಕರು ಬರುತ್ತಿಲ್ಲ ಅದರಿಂದ ನಮಗೂ ನಷ್ಟವಾಗುತ್ತಿದೆ”.
ಮಂಜುನಾಥ, ಹೂ ವ್ಯಾಪಾರಿ.

 

 

Share This Article
error: Content is protected !!
";