ಬಿಯರ್ ಬೆಲೆ ದಿಢೀರ್ ಏರಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಕರ್ನಾಟಕದಲ್ಲಿ ಬಿಯರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಜನಸಾಮಾನ್ಯರ ಪಾಲಿಗೆ ಕೈಗೆಟುವ 300 ರೂ. ಒಳಗಡೆ ಇರುವ ಕೆಲವು ಬಿಯರ್‌ಬ್ರ್ಯಾಂಡ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಿದ್ದು ಇಂದಿನಿಂದಲೇ ಬೆಲೆ ಏರಿಕೆ ದರ ಜಾರಿಗೆ ಬರಲಿದೆ.

- Advertisement - 

ಜನಪ್ರಿಯ ಬಿಯರ್ ಬ್ರ್ಯಾಂಡ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಹಲವು ಬಿಯರ್‌ಗಳ ಬೆಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಿದೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ದರ ಏರಿಕೆ ಮಾಡಿದಂತಾಗಿದೆ.

- Advertisement - 

ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಆಗಿತ್ತು. ಹೀಗಾಗಿ ಇದೀಗ ಸಿದ್ದರಾಮಯ್ಯ ಸರ್ಕಾರ ಬಿಯರ್ ಮೇಲಿನ ಸುಂಕ ಹೆಚ್ಚಳ ಮಾಡಿದೆ. ಅಲ್ಲದೇ ಕಾಂಗ್ರೆಸ್​ ಸರ್ಕಾರ ಬಂದಾಗಿನಿಂದ ಒಟ್ಟು ಐದು ಬಾರಿ ಬಿಯರ್ ದರ ಏರಿಕೆ ಮಾಡಿದೆ.

ಲಜೆಂಡ್‌ಬಿಯರ್‌ಮೊದಲು 100 ರೂಪಾಯಿಗೆ ಸಿಗುತ್ತಿತ್ತು. ಇದರಲ್ಲಿ 45 ರೂಪಾಯಿ ಏರಿಕೆಯಾಗಿದೆ. ಇನ್ನು ಪವರ್‌ಕೂಲ್‌ಹೆಸರಿನ ಬಿಯರ್‌ಗೆ ಈ ಹಿಂದೆ 130 ರೂಪಾಯಿ ಬೆಲೆ ಇತ್ತು. ಇಂದಿನಿಂದ 155 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಬ್ಲ್ಯಾಕ್‌ಫೋರ್ಟ್‌ಹೆಸರಿನ ಬಿಯರ್‌ಗೆ 15 ರೂಪಾಯಿ ದರ ಏರಿಕೆ ಮಾಡಲಾಗಿದೆ.

- Advertisement - 

ಇದರೊಂದಿಗೆ ಬ್ಲ್ಯಾಕ್‌ಫೋರ್ಟ್‌ಬಿಯರ್ ಇಂದಿನಿಂದ ಬಾಟಲ್‌ಗೆ 160 ರೂಪಾಯಿ ಆಗಿದೆ. ಹಂಟರ್‌ಬಿಯರ್‌ನ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 190 ರೂಪಾಯಿ ಆಗಿದೆ. ಅದರೊಂದಿಗೆ ವುಡ್‌ಪೀಕರ್‌ಕ್ರೆಸ್ಟ್‌ಹಾಗೂ ವುಡ್‌ಪೀಕರ್‌ಗ್ಲೈಡ್‌ಬಿಯರ್‌ಬೆಲೆಯಲ್ಲಿ ತಲಾ 10 ರೂಪಾಯಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಿಯರ್‌ಗಳು ಕ್ರಮವಾಗಿ 250 ಹಾಗೂ 240 ರೂಪಾಯಿಗೆ ಇಂದಿನಿಂದ ಮಾರಾಟವಾಗುತ್ತಿದೆ.

ಬಿಯರ್​ ದರ ಏರಿಕೆಗೆ ಬಾರ್ ಮಾಲೀಕರು, ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಾರ್ ಮ್ಯಾನೇಜರ್ ಪ್ರತಿಕ್ರಿಯಿಸಿದ್ದು, ಬಿಯರ್ ದರ ಹೆಚ್ಚಳದಿಂದ ಗ್ರಾಹಕರು ನಮ್ಮ ಜೊತೆ ಜಗಳ ಮಾಡುತ್ತಿದ್ದಾರೆ. ಈ ಸರ್ಕಾರ ಬಂದಮೇಲೆ 5ನೇ ಬಾರಿ ಬಿಯರ್ ದರ ಏರಿಕೆ ಮಾಡಿದೆ ಎಂದು ಅಸಮಾದಾನ ಹೊರಹಾಕಿದರು.

ಬಿಯರ್​ ದರ ಏರಿಕೆ ಮಾಡಿರೋದು ಸರಿಯಲ್ಲ. ನಮ್ಮಿಂದ ತಗೊಂಡು ಮಹಿಳೆಯರಿಗೆ ಕೊಡುತ್ತಿರುವುದು ಸರಿಯಲ್ಲ. ಕೂಡಲೇ ಬಿಯರ್ ದರ‌ಇಳಿಸಬೇಕೆಂದು ಮದ್ಯಪ್ರಿಯರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದು, ನಾವೂ ವೋಟ್​ ಹಾಕಿದ್ದೀವಿ, ನಮಗೂ ಬಸ್​​ನಲ್ಲಿ ಉಚಿತ ಪ್ರಯಾಣ ಕಲ್ಪಿಸಿ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರಕ್ಕೆ ಮದ್ಯಪ್ರಿಯರು ಆಗ್ರಹಿಸಿದ್ದಾರೆ.

 

 

Share This Article
error: Content is protected !!
";