ದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸಿದ ಪ್ರಧಾನಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಕಾಶ್ಮೀರದಲ್ಲಿ ನಡೆದ 27 ಜನರ ಮಾರಣಹೋಮಕ್ಕೆ ದೇಶದ ರಕ್ಷಣಾ ಸಚಿವರು ದೇಶದ ಜನರ ಆಶೋತ್ತರಗಳಿಗೆ ಭಾರತದ ರಕ್ಷಣಾ ಇಲಾಖೆ ಸ್ಪಂದಿಸುವುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅದರಂತೆಯೇ ಮೊನ್ನೆ ತಡರಾತ್ರಿ ಪಾಕಿಸ್ತಾನದ ಉಗ್ರರರನ್ನು ಕೊಂದಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡ ಪಾಕಿಸ್ತಾನದ ಸೈನಿಕ ಪಡೆ ನಿನ್ನೆ ರಾತ್ರಿ ಭಾರತ ದೇಶದ 15 ಪ್ರಮುಖ ನಗರಗಳ ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿಗೆ ಮುಂದಾಗಿದ್ದರು. ಭಾರತದ ಸೈನ್ಯದ ತಂತ್ರಜ್ಞಾನದಿಂದ ಪಾಕಿಸ್ತಾನದ ಡ್ರೋನ್ ಬಾಂಬ್ ಗಳನ್ನು ಆಗಸದಲ್ಲೇ ಹೊಡೆದು ಹಾಕಿದ್ದಾರೆ.

ಈ ವಿಚಾರಕ್ಕೆ ಪ್ರತ್ಯುತ್ತರವಾಗಿ ಭಾರತದ ವಾಯುಪಡೆ ಪಾಕಿಸ್ತಾನದ ಸೈನಿಕ ನೆಲೆಗಳ ಮೇಲೆ ಹಾಗೂ ರಾಯಲ್ಪಿಂಡಿ ಕ್ರಿಕೇಟ್ ಸ್ಟೇಡಿಯಂ ಸೇರಿದಂತೆ ಇನ್ನು ಹಲವು ಭಾಗಗಳಲ್ಲಿ ಬಾಂಬ್ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. 1972ರಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಪಾಕಿಸ್ತಾನಕ್ಕೆ ಹಾಗೂ ಭಾರತಕ್ಕೆ ಪರಿಪೂರ್ಣ ಯುದ್ಧ ನಡೆದಿದೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ.

ಅದರ ತರುವಾಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಕಾಲಘಟ್ಟದಲ್ಲಿ ಪಾಕಿಸ್ತಾನದ ಮೇಲೆ ಪರಿಪೂರ್ಣ ಯುದ್ದ ಸಾರಿದ್ದಾರೆ. ಮೊದಲ ಯತ್ನದಲ್ಲೇ ಭಾರತದ ಸೈನಿಕ ಪಡೆ ಮೇಲುಗೈ ಸಾಧಿಸುತ್ತಿದ್ದಾರೆ. ಈ ವಿಚಾರದಲ್ಲಿ ಭಾರತದ ನಾಗರಿಕರಿಗೆ ದೇಶದ  ಪ್ರಧಾನಿ ಬಗ್ಗೆ ಹೆಮ್ಮೆ ಕಂಡುಬರುತ್ತಿದೆ. ನಾನು ವಿವರಿಸುತ್ತಿರುವ ಈ ವಿಚಾರಗಳು ಇತಿಹಾಸ ಪುಟಗಳಲ್ಲಿ ಅಜರಾಮರವಾಗಿ ಉಳಿದಿರುತ್ತದೆ ಎಂದು ರಘು ಗೌಡ ತಿಳಿಸಿದರು.

 

Share This Article
error: Content is protected !!
";