ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಬಸ್ಸಿನಲ್ಲಿದ್ದ ಪಾರಿವಾಳವನ್ನು ಚಾಲಕ ಹಿಡಿಯಲು ಹೋಗಿ ಬಸ್‌ನ್ನೇ ಪಲ್ಟಿಹೊಡೆಸಿದ ಘಟನೆ ಭಾನುವಾರ ಬೆಳಗ್ಗೆ ನಗರದ ಹೊರವಲಯದಲ್ಲಿ ನಡೆದಿದೆ.
ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ಚಲಿಸುತ್ತಿದ್ದ ಖಾಸಗಿಬಸ್ಸೊಂದು ರಾಷ್ಟ್ರೀಯ ಹೆದ್ದಾರಿ (೧೫೦-ಎ) ಬುಡ್ನಹಟ್ಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರಣ ಬಸ್‌ನಲ್ಲಿದ್ದ ಸುಮಾರು ೧೬ಕ್ಕೂ ಹೆಚ್ಚು ಜನರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
ಸದರಿ ಬಸ್ ಬೆಳಗ್ಗೆ ೯.೩೦ರ ಸಮಯದಲ್ಲಿ ಅತಿವೇಗದಿಂದ ಚಾಲನೆ ಮಾಡಿಕೊಂಡು ಬರುವ ಸಂದರ್ಭದಲ್ಲಿ ಚಾಲಕನ ಬಳಿ ರೊಟ್ಟಿನ ಬಾಕ್ಸ್‌ನಲ್ಲಿದ್ದ ಪಾರಿವಾಳ ಹಾರಿದಾಗ ಅದನ್ನು ಹಿಡಿಯುವ ಯತ್ನದಲ್ಲಿ ಚಾಲಕ ಸುಧಾಕರ ಸ್ಟೇರಿಂಗ್‌ನ್ನು ಸರಿಯಾಗಿ ನಿರ್ವಹಿಸದೆ ಬಸ್ ರಸ್ತೆಯ ಬದಿಯ ಸೇತುಗೆ ಡಿಕ್ಕಿ ಒಡೆದು ಉರುಳಿದೆ.
ಕೂಡಲೇ ಮಾಹಿತಿ ಪಡೆದ ಪೊಲೀಸ್ ಸ್ಥಳಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿ ಅಬ್ಯುಂಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ಧಾರೆ.
ಕೆರೆಯಾಗಳಹಳ್ಳಿಯ ಪರಶುರಾಮನಾಯ್ಕ(೪೦) ಎಂಬಾತನ ಎಡಗೈ ಮುರಿದಿದ್ದು, ಅಪಘಾತ ವೆಸಗಿದ ಬಸ್ ಚಾಲಕನ ವಿರುದ್ದ ಕ್ರಮಕೈಗೊಳ್ಳುವಂತೆ ದೂರು ನೀಡಿದ್ಧಾನೆ. ಬೇಡರೆಡ್ಡಿಹಳ್ಳಿ ನಾಗವೇಣಿ, ಮೊಹಲಹಳ್ಳಿಉಮೇಶ್, ಸೋಮಶೇಖರ್, ಹಿರೇಹಳ್ಳಿ ದಸ್ತಿಗಿರಿಸಾಬ್, ದುರುಗಮ್ಮ, ಪಾರ್ವತಮ್ಮ, ಭದ್ರಾವತಿ ಅಂಜಿನಮ್ಮ, ಹನುನಂತಪ್ಪ, ಲಕ್ಷ್ಮಮ್ಮ, ರಾಜಶೇಖರ, ಈರಣ್ಣ, ಕಿರಣ್‌ಕುಮಾರ್, ಲತಾಶ್ರೀ, ನವೀನ್‌ಕುಮಾರ್ ಗಾಯಗೊಂಡಿದ್ದು ಚಿಕಿತ್ಸೆ ಪಡೆದಿದ್ದಾರೆ. ಪಿಎಸ್‌ಐ ಧರೆಪ್ಪಬಾಳಪ್ಪದೊಡ್ಡಮನಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.