ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲೋಕೋಪಯೋಗಿ ಇಲಾಖೆಯು ರಾಜ್ಯದ ಹೆದ್ದಾರಿಗಳು ಮತ್ತು ಇತರ ಮೂಲಸೌಕರ್ಯಗಳ ನಿರ್ಮಾಣ, ನಿರ್ವಹಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿದೆ.ಆದರೆ ದೊಡ್ಡಬಳ್ಳಾಪುರ ದಲ್ಲಿ ಈ ಇಲಾಖೆ ಇದೆಯೇ ಎನ್ನುವ ಅನುಮಾನ ಸಾರ್ವಜನಿಕರದ್ದು.
ಇದಕ್ಕೆ ಇಂಬು ಕೊಟ್ಟಂತೆ ನಗರದ ಪ್ರವಾಸಿ ಮಂದಿರದ ಮಂದೆ ಮಳೆ ಬಂದ ಸಂದರ್ಭದಲ್ಲಿ ವೃತ್ತದಲ್ಲಿ ಒಳಚರಂಡಿಯಿಂದ ಹೊರ ಬರುವ ಕೊಳಚೆ ನೀರು ರಸ್ತೆ ಮೇಲೆ ಬಂದು ದುರ್ನಾತ ಹೊಡೆಯುತ್ತಿದ್ದರೂ ಇದಕ್ಕೆ ಸಂಬಂದ ಪಟ್ಟ ಅದಿಕಾರಿಗಳು ಕಂಡರು ಕಾಣದಂತೆ ಇದ್ದಾರೆ.
ಸಾರ್ವಜನಿಕರು ಹಾಗು ವಾಹನ ಸವಾರರು ಈ ಕೊಳಚೆ ನೀರು ಮೈಗೆ ಸಿಡಿಯುತ್ತಿದು ಆದಿಕಾರಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ. ಆಶ್ಚರ್ಯವೆಂದರೆ ಲೋಕೋಪಯೋಗಿ ಇಲಾಖೆಯ ಕಚೇರಿಯ ಕೂಗಳತೆ ದೂರದಲ್ಲೇ ಪ್ರವಾಸಿ ಮಂದಿರವಿದ್ದು ಅದರ ಮುಂದಿನ ರಸ್ತೆಯ ಸಮಸ್ಯೆಗಳ ಬಗ್ಗೆ ಇಲಾಖೆಗೆ ಗೊತ್ತಿಲ್ಲವೆಂದರೆ ಏನೆಂದು ಹೇಳುವುದು. ಅಥವಾ ಸಮಸ್ಯೆಯ ಅರಿವಿದ್ದು ಜಾಣ ಕುರುಡು ಪ್ರದರ್ಶಿಸುತ್ತಿದೆಯಾ ಎಂಬ ಅನುಮಾನ.
“ರಾಜ್ಯದಲ್ಲಿನ ಲೋಕೋಪಯೋಗಿ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದೆ. ಕರ್ನಾಟಕದ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಪ್ರಮುಖ ಜಿಲ್ಲಾ ರಸ್ತೆಗಳು ಸೇರಿದಂತೆ ರಸ್ತೆ ಕಾಮಗಾರಿಗಳ ನಿರ್ವಹಣೆಯನ್ನು ವಹಿಸಿಕೊಂಡಿದೆ.ಅದಿಕಾರಿಗಳು ಕೂಡಲೆ ಒಳಚರಂಡಿ ನೀರು ರಸ್ತೆಗೆ ಬರದಂತೆ ಕ್ರಮವಹಿಸಿ ಸಾರ್ವಜನಿಕರಿಗೆ ಸಹಕರಿಸಬೇಕು”.
ಪುರಷೋತ್ತಮ್ ಗೌಡ, ಕರವೇ ಮುಖಂಡ, ದೊಡ್ಡಬಳ್ಳಾಪುರ

