ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಭ್ರಮದ ಕ್ಷಣ – ತವರಿಗೆ ಮರಳಿದ ಬುದ್ಧನ ಅವಶೇಷಗಳು!
ಬರೋಬ್ಬರಿ 127 ವರ್ಷಗಳ ನಂತರ ಪಿಪ್ರಾಹ್ವಾದಲ್ಲಿ ದೊರಕಿದ್ದ ಭಗವಾನ್ ಬುದ್ಧನ ಅವಶೇಷಗಳು ಭಾರತಕ್ಕೆ ಮರಳಿ ಬಂದಿದ್ದು, ಈ ಅವಶೇಷಗಳನ್ನು ದೆಹಲಿಯ ಮ್ಯೂಸಿಯಂನಲ್ಲಿ ರಕ್ಷಿಸಲಾಗುತ್ತದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
1898ರಲ್ಲಿ ಭಾರತ ವಸಾಹತುಶಾಹಿ ಆಳ್ವಿಕೆಯಲ್ಲಿದ್ದ ವೇಳೆ ಪತ್ತೆಯಾಗಿದ್ದ ಭಗವಾನ್ ಬುದ್ಧನ ಅವಶೇಷಗಳನ್ನು ದೇಶದಿಂದ ಸಾಗಿಸಲಾಗಿತ್ತು.
ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯಯವರ ವಿಶೇಷ ಕಾಳಜಿಯಿಂದಾಗಿ ಭಾರತವು ಇಂದು ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ಬುದ್ಧನ ಅವಶೇಷಗಳನ್ನು ಹೊಂದುವಂತಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ಸುದೀರ್ಘ ಸಂಸ್ಕೃತಿ, ಪರಂಪರೆಗೆ ಇದೊಂದು ಹೆಮ್ಮೆಯ ಕ್ಷಣವಾಗಿದ್ದು, ಭಗವಾನ್ ಬುದ್ಧನ ಉದಾತ್ತ ಬೋಧನೆಗಳು ಸುಂಗಧ ದ್ರವ್ಯದಂತೆ ಎಲ್ಲೆಡೆಯೂ ಪಸರಿಸಲಿ ಎಂದು ಅವರು ತಿಳಿಸಿದ್ದಾರೆ.

