ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಕ್ಕಳು ಸದಾ ನಾವು ಹೇಳಿದಂತೆ ಮಾಡದೇ ನಾವು ಮಾಡಿದಂತೆ ಮಾಡುವ ಮನಸ್ಥಿತಿ ಹೊಂದಿರುತ್ತಾರೆ ಹಾಗಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಿದ್ಧರಿರುವ ಎಲ್ಲಾ ಪ್ರಶಿಕ್ಷಣಾರ್ಥಿಗಳು ತಾವು ಮಾಡುವ ಉತ್ತಮ ಕಾರ್ಯಗಳಿಂದಲೇ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬಿರಲು ಪ್ರಯತ್ನಸಬೇಕು ಎಂದು ಸಂಪನ್ಮೂಲ ವ್ಯಕ್ತಿಗಳಾದ ಕವಿತಾ ಮಧುಸೂದನ್ ತಿಳಿಸಿದರು.
ತಾಲ್ಲೂಕಿನ ಹೊರವಲಯದ ಶ್ರೀ ಕೊಂಗಾಡಿಯಪ್ಪ ಶಿಕ್ಷಣ ವಿದ್ಯಾಲಯ ಬಿ. ಇಡಿ ಕಾಲೇಜು ವತಿಯಿಂದ ಆಯೋಜನೆ ಮಾಡಲಾಗಿದ್ದ ಸಮುದಾಯ ಜೀವನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು ಮಕ್ಕಳು ಒಂದು ಬೀಜವಿದ್ದಂತೆ ಭೂಮಿಯಲ್ಲಿ ಹೇಗೆ ಬೀಜವು ಮೊಳಕೆ ಹೊಡೆದು ಗಿಡವಾಗಿ ಬೆಳೆದು ಫಲ ಕೊಡುವುದೋ ಹಾಗೆ ನಮ್ಮಲ್ಲಿ ಕಲಿಕಾಭ್ಯಾಸ ಮಾಡಲು ಬರುವ ಮಕ್ಕಳು ಕೂಡ ಹಾಗೆ ನಾವು ಅವರಿಗೆ ಉತ್ತಮ ರೀತಿಯ ಪೋಷಣೆ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದರು.
ಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ದೇಸಾಯಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಿನಿಮಾದ ನಾಯಕರನ್ನು ನೆಚ್ಚಿನ ವ್ಯಕ್ತಿಗಳಾಗಿ, ಮಾದರಿಯಾಗಿ ತೆಗೆದುಕೊಳ್ಳುತ್ತಾರೆ ಆದರೆ ಅವರ ಜೀವನ ರೂಪಿಸುವಲ್ಲಿ ಪ್ರಮುಖ ಪತ್ರ ವಹಿಸಿದ ಶಿಕ್ಷಕರೇ ನಿಜವಾದ ಹೀರೊ ಎಂಬ ವಿಷಯವನ್ನು ಮರೆತಿರುವುದು ವಿಪರ್ಯಾಸ. ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು,ಈ ವಿಷಯಗಳನ್ನು ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಿದ್ಧರಿರುವ ತಾವೆಲ್ಲರೂ ಅರಿತುಕೊಳ್ಳುವುದು ಮುಖ್ಯವಾಗಿದೆ ಎಂದರು.
ಹೇಗೆ ಜೇನುಹುಳು ಶ್ರಮಪಟ್ಟು ಜೇನು ಸಂಗ್ರಹಿಸಿ ಬೇರೆಯವರಿಗೆ ನೀಡುವುದೋ ಹಾಗೆಯೇ ಶಿಕ್ಷಕರ ವೃತ್ತಿ ಜೇನು ಹುಳುವಿನ ಜೀವನಕ್ಕೆ ಹೋಲುತ್ತದೆ ನಮ್ಮ ಶ್ರಮ ಕೇವಲ ವಿದ್ಯಾರ್ಥಿಗಳ ಜೀವನ ಉತ್ತಮಗೊಳಿಸುವ ನಿಟ್ಟಿನಲ್ಲಿ ಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ಶಿಕ್ಷಣ ವಿದ್ಯಾಲಯ ಬಿ. ಇಡಿ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್, ಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ದೇಸಾಯಿ, ಅಧ್ಯಕ್ಷರಾದ ರಾಮಶೆಟ್ರು, ಕಾರ್ಯದರ್ಶಿಗಳಾದ ಎಸ್ ಪ್ರಕಾಶ್, ಖಜಾಂಜಿಗಳಾದ ಜಗದೀಶ್ ಬಾಬು, ಉಪನ್ಯಾಸಕರಾದ ದೈಹಿಕ ಶಿಕ್ಷಣ ನಿರ್ದೇಶಕ ಹೇಮಂತ್ ಜಿ, ಸುಬ್ರಮಣಿ, ರಮ್ಯಾ, ಆಶಾ, ಶ್ರೀಕಾಂತ್, ನರೇಂದ್ರ ಸೇರಿದಂತೆ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.