ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೈಬೆರಳ ತುದಿಯಲ್ಲೇ ವಿಶ್ವದ ಆಗುಹೋಗುಗಳೆಲ್ಲವೂ ಕ್ಷಣಾರ್ಧದಲ್ಲಿ ತಿಳಿಯಬಹುದಾದ ಇಂದಿನತಂತ್ರಜ್ಞಾನ ಯುಗದ ಸವಾಲಿನಕಾಲಘಟ್ಟದಲ್ಲಿ ಕೂಡ ಪತ್ರಿಕೆಗಳು ತನ್ನ ಓದುಗಬಳಗವನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದರಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾದುದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಂಜಾನೆಯ ಕಾಫಿಯ ಜೊತೆ ತಪ್ಪದೇ ಪತ್ರಿಕೆಗಳನ್ನು ಓದುವುದು ನನ್ನ ದೀರ್ಘಕಾಲದ ಅಭ್ಯಾಸ. ಮಳೆ, ಗಾಳಿ, ಚಳಿಯೆನ್ನದೆ ಎಲ್ಲ ಕಾಲದಲ್ಲೂ ನಿತ್ಯವೂ ಮನೆಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರೆಲ್ಲರಿಗೂ ವಿಶ್ವ ಪತ್ರಿಕಾ ವಿತರಕರ ದಿನದ ಶುಭಾಶಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

