ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ೨೫ ವರ್ಷದೊಳಗಿನ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಎಸ್.ಬಿ.ಐ. ಲೈಫ್ ತಂಡ ಪಡೆದುಕೊಂಡಿತು. ಕೆಳಗೋಟೆ ಕಿಂಗ್ಸ್ ಎರಡನೆ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರೆ ರಾಯಲ್ ಸೇನಾ ಮೂರನೆ ಬಹುಮಾನ ಧಕ್ಕಿಸಿಕೊಂಡಿತು.
ಕೆಳಗೋಟೆ ಕಿಂಗ್ಸ್ ತಂಡದ ಧನುಶ್ ಬೆಸ್ಟ್ ರೈಡರ್, ಎಸ್.ಬಿ.ಐ. ಲೈಫ್‌ನ ಆಕಾಶ್‌ಗೌಡ ಬೆಸ್ಟ್ ಕ್ಯಾಚರ್, ಎಸ್.ಬಿ.ಐ. ನ ಕಿರಣ್‌ಗೌಡ ಬೆಸ್ಟ್ ಆಲ್ ರೌಂಡರ್ ಆಗಿ ಪಂದ್ಯಾವಳಿಯಲ್ಲಿ ಹೊರಹೊಮ್ಮಿದರು. ಜಯಶಾಲಿಗಳಿಗೆ ಆಕರ್ಷಕ ಕಪ್ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.