ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾರುಕಟ್ಟೆಯಲ್ಲಿ ನಕಲಿ ನೋಟುಗಳು ವ್ಯಾಪಕವಾಗಿ ಹರಿದಾಡುತ್ತಿದ್ದು ವರ್ತಕರು, ಜನಸಾಮಾನ್ಯರು ಕಂಗೆಟ್ಟಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದೆ.
ನೋಟು ಅಮಾನ್ಯೀಕರಣ ನಡೆದು 8 ವರ್ಷ ಕಳೆದರೂ ನಕಲಿ ನೋಟಿನ ಹಾವಳಿಗೆ ಅಂಕುಶವೇ ಇಲ್ಲದಂತೆ ಚಲಾವಣೆಯಲ್ಲಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ನೋಟು ರದ್ದತಿಯ ಉದ್ದೇಶ ನಕಲಿ ನೋಟುಗಳನ್ನು ನಿಯಂತ್ರಿಸುವುದು ಎಂದು ಸುಳ್ಳು ಹೇಳಿ ಜನರನ್ನು ನಂಬಿಸಿತ್ತು ಮೋದಿ ಸರ್ಕಾರ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.