ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲಲಿತಕಲಾ ಅಕಾಡೆಮಿಯ ವತಿಯಿಂದ 2022-23 ಮತ್ತು 2023-24ನೇ ಸಾಲಿನ ಗೌರವ ಪ್ರಶಸ್ತಿ, ಪ್ರದಾನ ಸಮಾರಂಭ ಹಾಗೂ 51-52ನೇ ವಾರ್ಷಿಕ ಕಲಾ ಬಹುಮಾನ – ಪ್ರದರ್ಶನ, ಮತ್ತು 2021-22 ಹಾಗೂ 2022-23 ನೇ ಸಾಲಿನ ವರ್ಣಶ್ರೀ ಪ್ರಶಸ್ತಿಗಳಿಗೆ ಅಕಾಡೆಮಿಯ ಅಧ್ಯಕ್ಷರಾದ ಪ.ಸ.ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಪುರಸ್ಕøತರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದ ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಿಗೆ ತಲಾ 50,000 ರೂ.ಗಳ ನಗದಿನೊಂದಿಗೆ ಗೌರವ ಪ್ರಶಸ್ತಿ, ಚಿತ್ರಕಲಾ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕಲಾವಿದರನ್ನು ಗುರುತಿಸಿ ಅವರಿಗೆ ತಲಾ 25,000 ರೂ.ಗಳ ನಗದಿನೊಂದಿಗೆ ವರ್ಣಶ್ರೀ ಪುರಸ್ಕಾರ ಹಾಗೂ ವಾರ್ಷಿಕ ಕಲಾ ಪ್ರದರ್ಶನದ 20 ಉತ್ತಮ ಕಲಾಕೃತಿಗಳಿಗೆ ತಲಾ 25,000ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
2022-23 ನೇ ಸಾಲಿನ ಗೌರವ ಪ್ರಶಸ್ತಿಗೆ ಕಲಾವಿದರಾದ ಗದಗದ ಕಮಲ್ ಅಹಮದ್, ತುಮಕೂರಿನ ನಿರ್ಮಲಾ ಕುಮಾರಿ, ಬೆಂಗಳೂರಿನ ಬಿ.ಪಿ.ಕಾರ್ತಿಕ್, 2023-24 ನೇ ಸಾಲಿನ ಗೌರವ ಪ್ರಶಸ್ತಿಗೆ ಕಲಾವಿದರಾದ ಯಾದಗಿರಿಯ ನಿಜಲಿಂಗಪ್ಪ ಹಾಲ್ವಿ, ಹುಬ್ಬಳ್ಳಿಯ ವಿಠಲ ರೆಡ್ಡಿ ಚುಳಕಿ ಹಾಗೂ ಕಲಬುರಗಿಯ ಬಾಬೂರಾವ್ ಹೆಚ್ ಅವರು ಆಯ್ಕೆಯಾಗಿದ್ದಾರೆ.
2021-22ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಕಲಾವಿದರಾದ ಮಂಗಳೂರಿನ ವೀಣಾ ಶ್ರೀನಿವಾಸನ್, ಬಾಗಲಕೋಟೆಯ ಪರಮೇಶ ಜೋಳದ, ರಾಯಚೂರಿನ ಪಿ.ಎ.ಬಿ.ಈಶ್ವರ, ಪೂಣೆಯ ಕುಡಲಯ್ಯಾ ಹಿರೇಮಠ, ತುಮಕೂರಿನ ಅಶೋಕ ಕಲ್ಲಶೆಟ್ಟಿ, ವಿಜಯಪುರದ ನಂದಬಸಪ್ಪ ವಾಡೆ, ರಾಮನಗರದ ಕೆ.ಜಿ.ಲಿಂಗದೇವರು, ಮಡಿಕೇರಿಯ ಮಹೇಶ. ಬಿ, ಹುಬ್ಬಳ್ಳಿಯ ಶಕುಂತಲಾ ವರ್ಣೇಕರ ಹಾಗೂ ಬಳ್ಳಾರಿಯ ಮಂಜುನಾಥ. ಜಿ ಅವರು ಆಯ್ಕೆಯಾಗಿದ್ದಾರೆ.
2022-23ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಕಲಾವಿದರಾದ ಶಿರಸಿಯ ಪ್ರಕಾಶ್ ನಾಯಕ್, ಗದಗದ ಬಸವರಾಜ ಸಿ ಕುತ್ನಿ, ಕಲಬುರಗಿಯ ಜಗದೀಶ್ ಕಾಂಬ್ಲೆ, ಹಾಸನದ ಜಯದೇವಣ್ಣ .ಟಿ, ಬಾಘಲಕೋಟೆಯ ಶೈಲ ದೊತ್ರೆ, ಚಾಮರಾಜನಗರದ ಮಹದೇವಸ್ವಾಮಿ .ಸಿ, ಬೆಳಗಾವಿಯ ಮೀನಾಕ್ಷಿ ಸದಲಗಿ, ತುಮಕೂರಿನ ರವೀಶ್ ಕೆ.ಎಂ., ಧಾರವಾಡದ ಎಫ್.ವಿ.ಚಿಕ್ಕಮಠ ಹಾಗೂ ಮಂಗಳೂರಿನ ಸಯ್ಯದ್ ಅಸೀಫ್ ಆಲಿ ಅವರು ಆಯ್ಕೆಯಾಗಿದ್ದಾರೆ.
51 ನೇ ವಾರ್ಷಿಕ ಕಲಾ ಬಹುಮಾನಕ್ಕೆ ಕಲಾವಿದರ ಕಲಾಕೃತಿಗಳನ್ನು ಆಯ್ಕೆ ಮಾಡಿದ್ದು, Worlds you love ಕಲಾಕೃತಿಗೆ ಕಲಬುರಗಿಯ ಶಿವಪ್ರಸಾದ, ಟ್ರಾವೆಲ್ಸ್ ಅಂಡ್ ರೆಪ್ಲೆಕ್ಷನ್ ಸೀರಿಸ್ –1 ಕಲಾಕೃತಿಗೆ ಬೆಂಗಳೂರಿನ ಭಾನುಪ್ರಕಾಶ್ ಬಿ.ಎಲ್., ದ ಅನ್‍ಡಿಫೈನಡ್ ಕಲಾಕೃತಿಗೆ ಮಂಗಳೂರಿನ ರಾಜೇಂದ್ರ ಕೇದಿಗೆ, ಫೆಸೆಟ್ಸ್ ಸೆಟಲ್ಸ್ ಕಲಾಕೃತಿಗೆ ಬೆಂಗಳೂರಿನ ರೋಷ್ ರವೀಂದ್ರನ್, ವಿಲೇಜ್/ಸಿಟಿ ಕಲಾಕೃತಿಗೆ ಹೊಸಕೋಟೆಯ ವರ್ಣಂ ನಾರಾಯಣ, ರೀಸೈಕಲ್ ಕಲಾಕೃತಿಗೆ ತುಮಕೂರಿನ ಅಮೋಘರಾಜ್ ಡಿ ಬಾಲಿ, ಮರಳಿ ಗೂಡಿಗೆ ಕಲಾಕೃತಿಗೆ ಕಲಬುರಗಿಯ ಗಿರೀಶ ಬಿ.ಕುಲಕರ್ಣಿ, ಜೀವನದ ಪ್ರಯಾಣದ ನಡುವೆ ಭಾವೋದ್ರೇಕ ಕಲಾಕೃತಿಗೆ ಚಾಮರಾಜನಗರದ ನಾಗರಾಜು. ಪಿ, ಫಸ್ಟ್ ಜನರೇಷನ್ ಕಲಾಕೃತಿಗೆ ಬೀದರ್‍ನ ಹಣಮಂತ ಮಲ್ಕಾಪುರೆ ಹಾಗೂ ಜೀವನಕ್ಕಾಗಿ ಕಲಾಕೃತಿಗೆ ಹಾಸನದ ಕೃಷ್ಣಾಚಾರಿ ಅವರು ಆಯ್ಕೆಯಾಗಿದ್ದಾರೆ.
52 ನೇ ವಾರ್ಷಿಕ ಕಲಾ ಬಹುಮಾನಕ್ಕೆ ಕಲಾವಿದರ ಕಲಾಕೃತಿಗಳನ್ನು ಆಯ್ಕೆ ಮಾಡಿದ್ದು, ಮದ್ಯಮಾದಿರಾಗ ಕಲಾಕೃತಿಗೆ ಕಲಬುರಗಿಯ ಡಾ.ರೆಹಮಾನ್ ಪಟೇಲ್, ಸಂಸ್ಕೃತಿ ಚಲನೆ ಕಲಾಕೃತಿಗೆ ದಕ್ಷೀಣಕನ್ನಡ ಪ್ರಶಾಂತ.ಕೆ, Unknown Metamorphosis-1 ಕಲಾಕೃತಿಗೆ ಬೆಂಗಳೂರಿನ ಅರುಳ್ ದೇವನ್, ಅನ್‍ಹೋಮ ಕಲಾಕೃತಿಗೆ ಉಡುಪಿಯ ಬಿನೆಲ್ ಮರಿಯಾ, ಬಿನೆತ್ ದ ಸರ್ಫೆಸ್ ಕಲಾಕೃತಿಗೆ ಬೆಂಗಳೂರಿನ ಗೌತಮಿ ಎಂ., ಯುನೈಟೆಡ್ –2 ಕಲಾಕೃತಿಗೆ ವಿಜಯಪುರದ ರಮೇಶ್ ಚವ್ಹಾಣ, ಚಂಚಲೆ ಕಲಾಕೃತಿಗೆ ಕೊಪ್ಪಳದ ಸಂತೋಷ ಪತ್ತಾರ, UNTITLED ಕಲಾಕೃತಿಗೆ ಮೈಸೂರಿನ ಚೈತ್ರ. ಎನ್., ಆಸರೆ ಕಲಾಕೃತಿಗೆ ಮೈಸೂರಿನ ಶಿವರಾಮು ಹಾಗೂ ಕಣಜ ಕಲಾಕೃತಿಗೆ ಮೈಸೂರಿನ ದಯಾನಂದ.ಎನ್. ಅವರುಗಳನ್ನು ಆಯ್ಕೆಮಾಡಲಾಗಿದೆ ಎಂದು ಕರ್ನಾಟಕ ಲಲಿತಾಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ನೀಲಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

