ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿಗೆ ಪದಾಧಿಕಾರಿಗಳು ಆಯ್ಕೆ ಹಾಗು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಮಾಡಲಾಯಿತು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಭಾರತ ಭ್ರಷ್ಟಚಾರ ವಿರೋಧಿ ಮಂಡಲಿ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಹೆಚ್ ರಾಜ್ ಗೋಪಾಲ ರವರು ಮಾತನಾಡಿ ಸಮಾಜದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರುವ ಕಾರಣ ದೇಶ ಪ್ರಗತಿಗೆ ಅಡಚಣೆ ಯಾಗುತ್ತಿದೆ.
ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರು ದೇಶ ಮತ್ತು ರಾಜ್ಯ ಪ್ರಗತಿ ಯತ್ತ ಸಾಗುವಲಿ ಯಾವುದೆ ಸಂಶಯವಿಲ್ಲ ಎಂದರು.
ನಂತರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಿ ಎನ್ ರಮೇಶ್ ಮಾತನಾಡಿ ಸಂವಿಧಾನದ ಆಶಯಗಳು ಎಲ್ಲರಿಗೂ ಸಮ ಬಾಳು ನೀಡುವ ನಿಟ್ಟಿನಲ್ಲಿ ದೇಶ ಮತ್ತು ರಾಜ್ಯದಲ್ಲಿನ ರಾಜಕಾರಣ ಪೂರ್ವಿಕರು ಬಿಟ್ಟಿರುವ ಆಸ್ತಿಗಳನ್ನು ಮಾರಾಟ ಮಾಡಿ ದಿವಾಳಿ ಮಾಡುತ್ತಿರುವುದು ಹಾಗೂ ಸರ್ಕಾರಿ ಇಲಾಖೆಗಳನ್ನು ಖಾಸಗಿಕರಣ ಮಾಡುವುದರ ಮುಖಾಂತರ ದೇಶವನ್ನು ಆದೂಗತಿಗೆ ತರುವಂತ ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಗಳ ವಿರುದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಭಾರತ ಭ್ರಷ್ಟಚಾರ ವಿರೋಧಿ ಮಂಡಲಿ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರ ಉಪಾಧ್ಯಕ್ಷ ಕುಣಿಗಲ್ ಶಿವಣ್ಣ, ರಾಷ್ಟ್ರೀಯ ಕಾನೂನು ಸಲಹೆಗಾರ ಪುರುಷೋತ್ತಮ್ ಎಂ., ರಾಜ್ಯಾಧ್ಯಕ್ಷ ವೇಣುಗೋಪಾಲ್ ಎಂ ಎನ್, ರಾಜ್ಯ ಕಾರ್ಯದರ್ಶಿ ದಿಲೀಪ್, ಕುಮಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೌರವಾಧ್ಯಕ್ಷ ಪು.ಮಹೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಉಮಾಶಂಕರ್ ಡಿ ಆರ್,
ಬೆಂಗಳೂರು ನಗರ ಮಹಿಳಾ ಘಟಕ ಅಧ್ಯಕ್ಷೆ ಕನ್ಯಾಕುಮಾರಿ ಬಿ ಟಿ, ಬೆಂಗಳೂರು ಗ್ರಾಮಾಂತರ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಿಲ್ಪ ವಿ, ಉಡುಪಿ ಜಿಲ್ಲೆ ಅಧ್ಯಕ್ಷ ಕಿರಣ್ ಕುಮಾರ್, ನ್ಯಾಷನಲ್ ಪ್ರಿನ್ಸಿಪಲ್ ಕಾರ್ಯದರ್ಶಿ ದೇವರಾಜು, ಬೇಗೂರು ಹೋಬಳಿ ಅಧ್ಯಕ್ಷ ಟೋನಿ ಹಾಗು ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಭಾರತ ಭ್ರಷ್ಟಚಾರ ವಿರೋಧಿ ಮಂಡಲಿ ಸದಸ್ಯರುಗಳು ಹಾಜರಿದ್ದರು.
“ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಯಾವುದೆ ಸರ್ಕಾರಿ ಕೆಲಸಗಳು ಜನಸಾಮಾನ್ಯ ಕೈಗೆ ತಲುಪಬೇಕಾದರೆ ಲಂಚ ಇಲ್ಲದೆ ಯಾವ ಕಾರ್ಯವು ನೆಡೆಯುವುದಲ್ಲಿ ಅಧಿಕಾರಿಗಳು ಅಧಿಕಾರಕ್ಕೆ ಬರಬೇಕಾದರೆ ಲಂಚ ಇಲ್ಲದೆ ಬರಲು ಸಾದ್ಯವಿಲ್ಲ ಅದರಿಂದ ರಾಜಕಾರಣಿಗಳು ಅಧಿಕಾರಕ್ಕೆ ಬರ ಬೇಕಾದರು ಹಣ ಹಾಕಿ ಹಣ ಮಾಡುವ ಉದ್ದೇಶದಿಂದ ಈ ಸಮಾಜ ಭ್ರಷ್ಟಚಾರದಲ್ಲಿ ಮುಳುಗಿದೆ”.
ರುದ್ರೇಶ್ ಕುಮಾರ್ ಬಿ, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ,ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿ.