ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೇಖಕ ಅಶ್ವತ್ಥ್ ಕಲ್ಲೇದೇವರಹಳ್ಳಿ ಅವರು ಇಂಜಿನಿಯರಿಂಗ್ ಕಾಲೇಜಿನ ವೃತ್ತಿಯಲ್ಲಿ ಎಷ್ಟೇ ಬ್ಯುಸಿ ಇದ್ದರು ಅವರ ಒಲವು ಮಾತ್ರ ಸಾಹಿತ್ಯದ ಕಡೆ. ಸದಾ ಚಟುವಟಿಕೆಯ ವ್ಯಕ್ತಿತ್ವ ರೂಢಿಸಿಕೊಂಡ ಇವರು ತಮ್ಮ ನೈಜ ಬರವಣಿಗೆಯ ಮೂಲಕ ಕಥೆ, ಕವಿತೆ, ಅಂಕಣ ಇನ್ನಿತರ ಸಾಹಿತ್ಯದ ವಿವಿದ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಈವರೆಗೆ ಇವರ 6 ಪುಸ್ತಕಗಳು ಪ್ರಕಟವಾಗಿವೆ.
ಇವರು 2021ರಲ್ಲಿ ಗ್ರಾಮೀಣ ಸೊಗಡಿನ ಮಹಿಳಾ ಪ್ರಧಾನ ಕಿರುಚಿತ್ರ “ಬಳಪಿನಗುತ್ತಿ” ನಿರ್ದೇಶಿಸಿದ್ದರು. ಮತ್ತೆ ಇದೀಗ ಕೌಟುಂಬಿಕ ಕಥಾವಸ್ತುವನ್ನೊಳಗೊಂಡ, “ನೀನೆಂಬ ಜೀವಂತಿಕೆ” ಎಂಬ ಕಿರುಚಿತ್ರದ ಮೂಲಕ ಮತ್ತೊಮ್ಮೆ ಆಕ್ಷನ್ ಕಟ್ ಹೇಳಲು ತಯಾರಿ ನಡೆಸಿದ್ದಾರೆ.
ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಧಿಕ್ಕರಿಸದೇ ಅನನ್ಯ ಪ್ರೀತಿಯನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉದ್ಭವಿಸುವ ಪರಿಸ್ಥಿತಿಗಳನ್ನು ಇಲ್ಲಿನ ಪಾತ್ರಗಳು ಹೇಗೆ ನಿಭಾಯಿಸಬಲ್ಲವು ಅನ್ನುವುದನ್ನು ಈ ಕಿರುಚಿತ್ರ ಹೇಳುತ್ತದೆ ಎನ್ನುತ್ತಾರೆ ನಿರ್ದೇಶಕ ಅಶ್ವತ್ಥ್.
ಈ ಕಿರುಚಿತ್ರದ ನಿರ್ಮಾಣವನ್ನು “ಟೀಂ ಅಕ್ಸ” ಮಾಡುತ್ತಿದ್ದು, ನಾಯಕರಾಗಿ ಮನೋಜ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ ಹಾಗೂ ನಾಯಕಿಯಾಗಿ ರಂಗಾಯಣದ ಕು. ವನಿತಾ ಜೊತೆಯಾಗಿದ್ದಾರೆ ಮತ್ತು ಛಾಯಾಗ್ರಹಣ ನರಸಿಂಹ ಸಿ ಅವರದು. ಈ ಚಿತ್ರದ ಚಿತ್ರೀಕರಣವನ್ನು ಜೂನ್ ಎರಡನೇವಾರದಲ್ಲಿ
ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನೆಡೆಸುವುದಾಗಿ ಚಿತ್ರತಂಡ ಹೇಳಿದೆ. ವಿಜಯಲಕ್ಷ್ಮಿ ಮಂಡ್ಯ, ಸುನೀಲ್ ರತ್ನಾಕರ್, ವಿನಾಯಕ ಭಜಂತ್ರಿ, ಹೆಚ್ ವೆಂಕಟೇಶ್, ಪುಟ್ಟರಾಜು ಮತ್ತು ನಂದಿನಿ ತಂಡದ ಜೊತೆಗಿದ್ದಾರೆ. ಈ ಕಿರುಚಿತ್ರ ಯಶಸ್ವಿಯಾಗಲೆಂದು ನಮ್ಮ ಪತ್ರಿಕೆಯು ಟೀಂ ಅಕ್ಸ ಚಿತ್ರತಂಡಕ್ಕೆ ಶುಭ ಹಾರೈಸುತ್ತದೆ.