“ಮುಗಿಲ ಮಲ್ಲಿಗೆ” ಮೊದಲ ಹಂತದ ಚಿತ್ರೀಕರಣ ಮುಕ್ತಾಯ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
    ನಾಲ್ಕು ದಶಕಗಳ ಹಿಂದೆ ತೆರೆಕಂಡ ಸೂಪರ್ ಹಿಟ್ ಚಿತ್ರ ಮುಗಿಲ ಮಲ್ಲಿಗೆ. ಇದೀಗ ಅದೇ ಶೀರ್ಷಿಕೆಯಡಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ‌.  ಎ ಎನ್ ಆರ್ ಪಿಕ್ಚರ್ಸ್ ಬ್ಯಾನರ್  ಅಡಿಯಲ್ಲಿ ನಾಗರಾಜ್ ರೆಡ್ಡಿ ಅವರು ಈ ಚಿತ್ರವನ್ನು  ನಿರ್ಮಿಸುತ್ತಿದ್ದುಈಗಾಗಲೇ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಿಂದೆ ತೆಲುಗಿನಲ್ಲಿ ರುದ್ರಾಕ್ಷಪುರಂ ಹಾಗು ಪ್ರೇಮಭಿಕ್ಷ ಸಿನಿಮಾಗಳನ್ನು ನಿರ್ದೇಶಿಸಿರುವ ಆರ್. ಕೆ. ಗಾಂಧಿ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ತನ್ನ ತಮ್ಮನ ಸಾವಿಗೆ ಕಾರಣಳಾದ ನಾಯಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ಖಳ ನಾಯಕನೊಂದಿಗೆ ನಾಯಕ ಹೇಗೆ ಹೋರಾಟ ನಡೆಸಿ, ತನ್ನ ಹುಡುಗಿಯನ್ನು ಹೇಗೆ ಕಾಪಾಡುತ್ತಾನೆ ಎನ್ನುವುದೇ  ಮುಗಿಲ ಮಲ್ಲಿಗೆ ಚಿತ್ರದ ಕಥಾವಸ್ತು.

ಕಮರೊಟ್ಟು ಚೆಕ್ ಪೋಸ್ಟ್, ಒಲವೇ ಮಂದಾರ -2 ಖ್ಯಾತಿಯ ನಟ ಸನತ್ ಹಾಗೂ ಸಹನಾಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. 

   ‌ಮುಗಿಲ ಮಲ್ಲಿಗೆ ಸಿನಿಮಾಗೆ ಹೊಸಕೋಟೆ ಸುತ್ತ ಮುತ್ತಲಿನ ಗಟ್ಟಿಗನಬ್ಬೆ, ಪೂಜೇನ ಅಗ್ರಹಾರಕಂಬ್ಳಿಪುರ ಕಾಟೇರಮ್ಮ, ಭಕ್ತರಹಳ್ಳಿ ಮುಂತಾದ ಲೊಕೇಶನ್ ಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದ್ದು, ಸಧ್ಯದಲ್ಲೇ ಎರಡನೇ ಹಂತದ ಚಿತ್ರೀಕರಣವನ್ನು ಪ್ರಾರಂಭಿಸಲಾಗುವುದು.

     ಈ ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ, ರಾಜೀವ್ ಕೃಷ್ಣ ಅವರ  ಸಾಹಿತ್ಯ, ವಿನಯ್  ಜಿ. ಆಲೂರು ಅವರ ಸಂಕಲನ, ಥ್ರಿಲ್ಲರ್ ಮಂಜು ಅವರ  ಸಾಹಸ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. 

  ಈ ಚಿತ್ರದಲ್ಲಿ ಬಲ ರಾಜ್ ವಾಡಿ, ಶಂಕನಾದ ಆಂಜಿನಪ್ಪ , ಅನ್ನಪೂರ್ಣ, ಶಂಕರ್, ಎಂ.ವಿ. ಸಮಯ್, ಮೋನಿಕ, ಚಂದ್ರಕಲಾ, ರೇಣುಕಾ, ಜಯರಾಂ, ವಸಂತ ನಾಯಕ್, ಪ್ರವೀಣ್, ಧರಣಿ, ಕಿಶೋರ್ ಕುಂಬ್ಳೆ, ಶಿವು ಕಾಸರಗೋಡು, ಬೃಂದ ಹಾರಿಕ, ರಾಜೇಶ್ , ರವಿ, ಧಿನ, ಕಿರಣ್ ಗಟ್ಟಿಗನಬ್ಬೆ ಮುಂತಾದವರು ನಟಿಸುತ್ತಿದ್ದಾರೆ.  ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗುತ್ತಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";