ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಧ್ಯಮ ವರ್ಗದವರನ್ನು ಸುಲಿಗೆ ಮಾಡುವುದೇ ಕಾಂಗ್ರೆಸ್ ಸರ್ಕಾರದ ಖಯಾಲಿ ಆಗಿಬಿಟ್ಟಿದೆ. ಗ್ಯಾರಂಟಿಗಾಗಿ ಹಣ ಹೊಂದಿಸಲು ಸರ್ಕಸ್‌ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಈಗ ಸೆಸ್(ಉಪ ತೆರಿಗೆ) ನೆಪದಲ್ಲಿ ರಾಜ್ಯದಲ್ಲಿ ಲೂಟಿಗೆ ಇಳಿದಿದೆ ಎಂದು ಜೆಡಿಎಸ್ ಕಿಡಿ ಕಾರಿದೆ.
ದ್ವಿಚಕ್ರ ವಾಹನಗಳಿಗೆ ಮತ್ತು ಸಾರಿಗೆಯೇತರ ಮೋಟಾರು ಕಾರುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.
ಇನ್ಮುಂದೆ ಹೊಸ ವಾಹನ ಖರೀದಿ ವೇಳೆ ಖರೀದಿದಾರರು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕು. ಖಾಲಿಯಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಕಾಂಗ್ರೆಸ್‌ಸರ್ಕಾರ ಮಧ್ಯಮ ವರ್ಗವನ್ನು ಟಾರ್ಗೆಟ್‌ಮಾಡಿ ತೆರಿಗೆ ಬರೆ ಎಳೆಯುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.