ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹಣಕಾಸು ಪರಿಸ್ಥಿತಿ ಹದಗೆಟ್ಟಿದ್ದು, ದಿವಾಳಿ ಅಂಚಿಗೆ ತಲುಪಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಜೆಡಿಎಸ್ ಆರೋಪಿಸಿದೆ.
ಗ್ಯಾರಂಟಿಗೆ ಹಣ ಹೊಂದಿಸಲಾಗದ ಖಾಲಿ ಕೈ ಸಿದ್ದರಾಮಯ್ಯ ಸರ್ಕಾರ, ಈಗ ವಿಕಲಚೇತನರ ಹಣಕ್ಕೂ ಕನ್ನ ಹಾಕಿದೆ ಎಂದು ಜೆಡಿಎಸ್ ಆರೋಪಿಸಿದೆ.
ಶೇಕಡ 80% ಅನುದಾನಕ್ಕೆ ಕತ್ತರಿ ಹಾಕಿ ವಿಕಲಚೇತನರನ್ನು ಮತ್ತಷ್ಟು ಶಕ್ತಿ ಹೀನರನ್ನಾಗಿಸುತ್ತಿದೆ. ಸರ್ಕಾರದಲ್ಲಿ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಬೊಗಳೆ ಬಿಡುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿಕಲಚೇತನರ ನಿಧಿ ಕಡಿತ ಮಾಡಿದ್ದು ಯಾಕೆ ? ಭ್ರಷ್ಟ ಕಾಂಗ್ರೆಸ್‌ಸರ್ಕಾರದ ಈ ಕ್ರೂರ ನಡೆಗೆ ಕ್ಷಮೆಯೇ ಇಲ್ಲ ಎಂದು ಜೆಡಿಎಸ್ ತಿಳಿಸಿದೆ.