ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೌರ ಕಾರ್ಮಿಕರ ಬಳಿಯೂ ಲಂಚಕ್ಕೆ “ಕೈ” ಒಡ್ಡಿ, ಅವರ ಆಕ್ರೋಶಕ್ಕೆ ಕಾರಣವಾದ ಭಂಡ ಹಾಗೂ ಭ್ರಷ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ!! ಎಂದು ಬಿಜೆಪಿ ದೂರಿದೆ.
ಕರ್ನಾಟಕ ಕಾಂಗ್ರೆಸ್‌ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್1 ಎಂದು ಮೊನ್ನೆ ತಾನೇ ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದರು.
ಈಗ ಅದಕ್ಕೆ ಪುಷ್ಠಿ ನೀಡುವಂತೆ ಪೌರ ಕಾರ್ಮಿಕರ ಖಾಯಂಮಾತಿಯಲ್ಲಿ ಪ್ರತಿ ಪೌರ ಕಾರ್ಮಿಕರಿಂದ ₹3 ರಿಂದ ₹5 ಲಕ್ಷ ಲಂಚ ಪಡೆಯಲಾಗುತ್ತಿದೆ ಎಂದು ಮಾಯಕೊಂಡದ ಕಾಂಗ್ರೆಸ್‌ಶಾಸಕ ಕೆ.ಎಸ್.ಬಸವಂತಪ್ಪ ಆರೋಪಿಸಿದ್ದಾರೆ.
ಕೂಡಲೇ ಪೌರ ಕಾರ್ಮಿಕರ ಖಾಯಂಮಾತಿಯಲ್ಲಿ ಅಕ್ರಮಗಳನ್ನು ತಡೆದು ಪಾರದರ್ಶಕತೆಯನ್ನು ತರಬೇಕೆಂದು ಬಿಜೆಪಿ ಆಗ್ರಹಿಸಿದೆ.